ಗ್ರಹಣದ ನಂತರ ಹೊರನಾಡಿನ ದೇವಿಗೆ ಶುದ್ಧೋದಕ ಅಭಿಷೇಕ
ಚಿಕ್ಕಮಗಳೂರು, ಜುಲೈ 17: ಭಾರತದ ಕೆಲವೆಡೆ ಭಾಗಶಃ ಚಂದ್ರಗ್ರಹಣ ಗೋಚರವಾಗಿದೆ. ಇಂದು ಮಧ್ಯರಾತ್ರಿ 1.31ಕ್ಕೆ ಚಂದ್ರಗ್ರಹಣ ಆರಂಭವಾಗಿ ಬೆಳಗಿನ ಜಾವ 3 ಗಂಟೆಗೆ ಚಂದ್ರಗ್ರಹಣದ ಪೂರ್ಣ ದರ್ಶನವಾಗಿದೆ.
ಆದ್ದರಿಂದ ಚಂದ್ರ ಗ್ರಹಣ ಮುಕ್ತಾಯದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿರುವ ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಹಣದ ನಂತರ ಶುದ್ಧ ಸ್ನಾನ ಮಾಡುವುದು ವಾಡಿಕೆ. ಅಂತೆಯೇ ಗ್ರಹಣ ಮುಗಿಯುತ್ತಿದ್ದಂತೆಯೇ ಅರ್ಚಕರು ಹೊರನಾಡು ಅನ್ನಪೂರ್ಣೆ ದೇವಿಗೆ ಶುದ್ಧೋದಕ ಅಭಿಷೇಕ ಮಾಡಿದರು.

ಅಭಿಷೇಕದ ಬಳಿಕ ಎಂದಿನಂತೆ ಪೂಜಾ-ಕೈಂಕರ್ಯಗಳು ನಡೆದವು. ಬೆಳಿಗ್ಗೆ 9 ಗಂಟೆಗೆ ಮಹಾಮಂಗಳಾರತಿ ನಡೆಯಿತು. ಗ್ರಹಣದ ಹಿನ್ನೆಲೆಯಲ್ಲಿ ಹೆಚ್ಚಿನ ಜನರೂ ಸೇರಿದ್ದರು.











Click it and Unblock the Notifications