ಹಣ ನೀಡಲಿಲ್ಲ ಎಂದು ತಾಯಿಯನ್ನೇ ಕೊಂದು ರಸ್ತೆಗೆ ಎಸೆದ ಮಗ
ಚಿಕ್ಕಮಗಳೂರು, ಜನವರಿ 17: ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿ ರಸ್ತೆಗೆ ಎಸೆದಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಆಗಲೇ ಕುಡಿದುಬಂದಿದ್ದ ಗಣೇಶ್ ಇನ್ನೂ ಕುಡಿಯಲು ಹಣಬೇಕು ಎಂದು ತಾಯಿಯನ್ನು ಪೀಡಿಸಿದ್ದಾರೆ, ಅದಕ್ಕೆ ಒಪ್ಪದ ತಾಯಿಗೆ ದೊಡ್ಡಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಗಣೇಶ್ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ತಾಯಿಯೇ ದುಡಿದು ಆತನನ್ನು ಸಲಹುತ್ತಿದ್ದಳು. ವೃದ್ಧೆ ಮೀನಾಕ್ಷಿ ಮೃತ ದುರ್ದೈವಿ.
ಗಣೇಶ್ ತಾಯಿ ಮೀನಾಕ್ಷಿಗೆ ಸರ್ಕಾರದಿಂದ 1.5 ಸಾವಿರ ರೂ ಪಿಂಚಣಿ ಹಣ ಬಂದಿತ್ತು, ಅದನ್ನು ಕೊಡು ಎಂದು ತಾಯಿಯನ್ನು ಪೀಡಿಸುತ್ತಿದ್ದ, ಈ ವಿಚಾರವಾಗಿ ಜಗಳವೂ ಕೂಡ ನಡೆದಿತ್ತು. ಆದರೆ ಜಗಳ ತಾರಕ್ಕೆ ಹೋಗಿ ಕೊನೆಗೆ ಕೋಪದಲ್ಲಿ ತಾಯಿಗೆ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳಿಕ ತಾಯಿಯನ್ನು ತಂದು ಬೀದಿಯಲ್ಲಿ ಎಸೆದಿದ್ದಾನೆ. ಬೆಳಗ್ಗೆ ಗ್ರಾಮಸ್ಥರು ಶವವನ್ನು ಗಮನಿಸಿದ್ದಾರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಗಣೇಶ್ ನಡವಳಿಕೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ ಬಳಿಕ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.












Click it and Unblock the Notifications