• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿಥಿಗೆಂದು ಬಂದಿದ್ದ ಯೋಧನ ದುರ್ಮರಣ; 20 ಗಂಟೆ ನಂತರ ಸಿಕ್ಕಿತು ಮೃತದೇಹ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಡಿಸೆಂಬರ್ 19: ತನ್ನ ಚಿಕ್ಕಪ್ಪನ ತಿಥಿಗೆಂದು ಎರಡು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಯೋಧರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

ಜಿಲ್ಲೆಯ ಬಾಳೇನಹಳ್ಳಿ ಗ್ರಾಮದ ಯೋಧ ಚಿದಾನಂದ್ ( 27) ಬುಧವಾರ (ಡಿ.18) ದಂದು ಅಪಘಾತದಲ್ಲಿ ಮೃತಪಟ್ಟಿದ್ದರು.

ಕಾಶ್ಮೀರದಲ್ಲಿ ಅಪ್ರಚೋದಿತ ಗುಂಡಿನ ದಾಳಿ: ಬೆಳಗಾವಿ ಯೋಧ ಹುತಾತ್ಮ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿದಾನಂದ್ ಎರಡು ದಿನಗಳ ಹಿಂದಷ್ಟೇ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದರು. ನಿನ್ನೆ ಸಖರಾಯಪಟ್ಟಣ ದಿಂದ ಬಾಳೇನಹಳ್ಳಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಆದರೆ ಮೃತದೇಹ ದೊರೆತಿರಲಿಲ್ಲ. ಯೋಧನ ಮೃತದೇಹ ಹಳ್ಳವೊಂದರಲ್ಲಿ ಬಿದ್ದಿದ್ದು, 20 ಗಂಟೆ ನಂತರ ಪತ್ತೆಯಾಗಿದೆ.

ಪೊಲೀಸ್ ನೆಟ್ ವರ್ಕ್ ತನಿಖೆ ನಂತರ ಪತ್ತೆಯಾದ ಯೋಧನ‌ ಮೃತ ದೇಹ ಪತ್ತೆಯಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A soldier who had come to the village just two days ago died in accidetn near Uddeboranahalli in Chikkamagaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X