ತಮ್ಮ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಸೋಲುತ್ತಾರೆ-ಯಡಿಯೂರಪ್ಪ ಭವಿಷ್ಯ

ಚಿಕ್ಕಮಗಳೂರು, ಮೇ 06: ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಸಾಟಿಯೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್‌ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದಲ್ಲಿಯೇ ಸೋಲುತ್ತಾರೆ. ಇನ್ನು ಕಡೂರು ಅಭ್ಯರ್ಥಿಯನ್ನು ಸೋಲಿಸುವ ಮಾತೆಲ್ಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

Siddaramaiah Will Lose In His Constituency Says BS Yediyurappa

ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 130 ರಿಂದ 135 ಸೀಟ್ ಗೆದ್ದು ಸರ್ಕಾರ ರಚಿಸುವುದು ಖಚಿತ. ಕ್ಷೇತ್ರದ ಅಭಿವೃದ್ಧಿಗೆ ಬೆಳ್ಳಿ ಪ್ರಕಾಶ್ ಅವರನ್ನು ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ಕಡೂರು ಕ್ಷೇತ್ರದ ಮತದಾರರದ್ದು ಎಂದು ಮತದಾರರಲ್ಲಿ ಮನವಿ ಮಾಡಿದರು.

ಇಂದಿನ ಜನಸ್ತೋಮ ಕಂಡರೆ ಬೆಳ್ಳಿ ಪ್ರಕಾಶ್ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ ಎಂದೇ ಹೇಳಬಹುದು. ತಾವು ಬಂದು ಮತ ಕೇಳುವ ಅಗತ್ಯವೇ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಇಲ್ಲಿಂದ ಬೆಳ್ಳಿ ಪ್ರಕಾಶ್ ಗೆಲ್ಲಿಸಿ ಕಳುಹಿಸಿ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀವೇ ಮುಂದಾಗಿ ಬನ್ನಿ ಎಂದು ಯಡಿಯೂರಪ್ಪ ಕರೆ ನೀಡಿದರು.

Siddaramaiah Will Lose In His Constituency Says BS Yediyurappa

ಮುಂದಿನ ದಿನಗಳು ಬಿಜೆಪಿ ದಿನಗಳಾಗಿರುತ್ತವೆ. ಅದು ಅಭಿವೃದ್ಧಿಯ ದಿನಗಳಾಗಲಿವೆ. ಬಿಜೆಪಿ ಪಕ್ಷದ ಮೇಲೆ ಭರವಸೆ ಇಡಿ. ರಾಜ್ಯದ ಅಭಿವೃದ್ಧಿಗೆ ಮತ ನೀಡಿ. ಬೆಳ್ಳಿ ಪ್ರಕಾಶ್ ಅವರು 35 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಮಾತನಾಡಿ ಶಾಸಕನಾಗಿ ಐದು ವರ್ಷದಲ್ಲಿ ಕ್ಷೇತ್ರ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಮಾಡಿರುವ ತೃಪ್ತಿ ನಮಗಿದೆ. ಯಡಿಯೂರಪ್ಪ ಅವರು ಮತ್ತು ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದ ನೀರಾವರಿಗಾಗಿ ಕೋಟ್ಯಂತರ ಹಣ ನೀಡಿದ್ದಾರೆ. ನೀರು, ಸೂರು, ಟಾರು ನೀಡಿದ್ದೇನೆ, ಶೇ.75 ಅಭಿವೃದ್ಧಿ ಆಗಿದೆ, ಉಳಿದ ಶೇ.25 ಈ ಬಾರಿ ಮುಗಿಸುವ ಉದ್ದೇಶವಿದೆ, ನನಗಾಗಿ ಒಂದು ಮತ ನೀಡಿ ನಿಮಗಾಗಿ ಜೀವನವನ್ನೇ ನೀಡುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು. ಅಲ್ಲದೇ ಬಿಜೆಪಿ ಅಧಿಕಾರದಲ್ಲಿ ಅಭಿವೃದ್ಧಿ ಮಂತ್ರದೊಂದಿಗೆ ರಾಷ್ಟ್ರೀಯವಾದ, ರಾಷ್ಟ್ರರಕ್ಷಣೆ ಎಲ್ಲವೂ ಸಾಧ್ಯ ಎಂದರು.

ಕಡೂರಿನ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಎಸ್.ಜಿ. ಕಲ್ಮುರುಡಪ್ಪ, ಕಡೂರು ಮಂಡಳ ಅಧ್ಯಕ್ಷ ಬಿ.ಪಿ. ದೇವಾನಂದ್ ಮಂಡಳ ವಕ್ತಾರ ಕೆ.ಆರ್. ಮಹೇಶ್ ಒಡೆಯರ್, ಸಂಜೀವ್ ಗೋಯಲ್, ಆದೇಶ್, ಸುನೀತಾ ಜಗದೀಶ್, ಬಿಜೆಪಿ ಮುಖಂಡರುಗಳಾದ ಟಿ.ಆರ್. ಲಕ್ಕಪ್ಪ, ಡಾ. ದಿನೇಶ್, ಇಮಾಮ್ ಸಾಬ್, ಮರುಳಸಿದ್ದಪ್ಪ ಮತ್ತು ಪುರಸಭೆ, ಜಿಪಂ, ತಾಪಂ, ಗ್ರಾಮ ಪಂಚಾಯಿತಿ ಸದಸ್ಯರು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+