ಕೊರೊನಾ ಹಬ್ಬಿಸಲು ಯತ್ನಿಸುತ್ತಿರುವವರ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆ
ಚಿಕ್ಕಮಗಳೂರು, ಏಪ್ರಿಲ್ 18: ರಸ್ತೆಗಳಲ್ಲಿ ನೋಟು ಮತ್ತು ವಸ್ತುಗಳ ಮೇಲೆ ಎಂಜಲು ಉಗುಳುವ ಘಟನೆಗಳ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದಾರೆ.
ಇಂತಹ ಘಟನೆಗಳ ಮೂಲಕ ಭಾರತದಲ್ಲಿ ಸಮಸ್ಯೆಯಾಗಿದೆ ಎಂದು ಜಗತ್ತಿನ ಮುಂದೆ ಪ್ರದರ್ಶಿಸಬೇಕು ಎನ್ನುವುದಾಗಿದೆ ಇದೊಂದು ರೀತಿಯ ಷಡ್ಯಂತ್ರ ಎಂದು ಹೇಳಿಕೆ ನೀಡಿದ್ದಾರೆ.
''ಹಲವಾರು ರೀತಿಯ ಜಿಹಾದಿಗಳಿದ್ದಾರೆ, ಹಲವಾರು ರೀತಿಯ ಟೆರರಿಸಂ ಈ ದೇಶದಲ್ಲಿ ನಡೆಯುತ್ತಿದೆ. ಅದ್ರಲ್ಲಿ ಇದೊಂದು ರೀತಿಯ ಟೆರರಿಸಂ. ಭಾರತದ ಘನತೆಯನ್ನ ಕಡಿಮೆ ಮಾಡಲು ಯಾರು ಷಡ್ಯಂತರ ಮಾಡುತ್ತಿದ್ದಾರೆ ಅವರ ಮೇಲೆ ದೇಶದ್ರೋಹದ ಕ್ರಮಕ್ಕೆ ಅಗ್ರಹಿಸುತ್ತೇನೆ'' ಎಂದಿದ್ದಾರೆ.

ಸತ್ಯವನ್ನ ಕಲೆ ಹಾಕುವ ಕೆಲಸ ಅಧಿಕಾರಿಗಳ ಮಟ್ಟದಲ್ಲಿ ಮಾಡ್ತಾ ಇದ್ದಾರೆ. ಈಗ ಕ್ರಮ ಕೈಗೊಳ್ಳಿ ಅನ್ನೋದು ನ್ಯಾಯ ಸಮ್ಮತವಲ್ಲ. ಜೀವಕ್ಕೆ ಅಪಾಯ ತಂದವರ ಬಗ್ಗೆ ಗಮನ ಹರಿಸುತ್ತಿದೆ. ಇದರ ಬಗ್ಗೆ ವರದಿ ಕಲೆ ಹಾಕಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕ್ಷಿ ತಯಾರು ಮಾಡುತ್ತಿದೆ. ಎಂದು ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications