14 ಮೊಟ್ಟೆ ನುಂಗಿ ತೆವಳಲಾಗದೆ ಕೂತಿದ್ದ ನಾಗನ ರಕ್ಷಣೆ

ಚಿಕ್ಕಮಗಳೂರು, ಜೂನ್ 11: ಹದಿನಾಲ್ಕು ಕೋಳಿ ಮೊಟ್ಟೆಗಳನ್ನು ನುಂಗಿದ ಏಳು ಅಡಿ ಉದ್ದದ ನಾಗರ ಹಾವೊಂದು ತೆವಳಲಾಗದೆ ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದ ಸಂದರ್ಭ ಆ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜಯ್ಯ ಎಂಬುವರ ಮನೆಯಲ್ಲಿ ಮರಿಗೆಂದು ಬುಟ್ಟಿಯಲ್ಲಿಟ್ಟಿದ್ದ 14 ಮೊಟ್ಟೆಗಳನ್ನು ನಾಗರಹಾವು ನುಂಗಿದೆ. ಮೊಟ್ಟೆ ಕಂಡ ಕೂಡಲೇ ಆಸೆಯಿಂದ ಎಲ್ಲವನ್ನೂ ನುಂಗಿದ ಹಾವು, ಮುಂದೆ ಸಾಗಲಾಗದೆ, ತೆವಳಲಾಗದೆ ಅಲ್ಲೇ ಕೂತಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ಮಂಜಯ್ಯ ಕೂಡಲೇ ಸ್ನೇಕ್ ಆರೀಫ್ ‍ಗೆ ವಿಷಯ ಮುಟ್ಟಿಸಿದ್ದಾರೆ.

rescue of snake which has swalloed 14 eggs

ಸ್ಥಳಕ್ಕೆ ಬಂದ ಸ್ನೇಕ್ ಆರೀಫ್, ಮನೆಯೊಳಗಿದ್ದ ಹಾವನ್ನ ಬಯಲು ಪ್ರದೇಶಕ್ಕೆ ತಂದು ಬಾಲ ಹಿಡಿದು ಹೊರಳಾಡಿಸುತ್ತಿದ್ದಂತೆ ನುಂಗಿದ್ದ ಎಲ್ಲಾ ಮೊಟ್ಟೆಗಳನ್ನು ಹಾವು ಕಕ್ಕಿದೆ. ನಂತರ ನಾಗರಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+