ಶ್ರೀಗಳನ್ನು ಭೇಟಿ ಮಾಡಿದ್ದು ಮರೆಯಲು ಸಾಧ್ಯವಿಲ್ಲ: ರಂಭಾಪುರಿ ಶ್ರೀ
Recommended Video

Siddaganga Swamiji : ಶ್ರೀಗಳನ್ನು ಭೇಟಿ ಮಾಡಿದ್ದು ಮರೆಯಲು ಸಾಧ್ಯವಿಲ್ಲ: ರಂಭಾಪುರಿ ಶ್ರೀ
ಚಿಕ್ಕಮಗಳೂರು, ಜನವರಿ 21: ನಡೆದಾಡುವ ದೇವರು ಸಿದ್ದಲಿಂಗ ಶ್ರೀಗಳ ಲಿಂಗೈಕ್ಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ರಂಭಾಪುರಿ ಶ್ರೀಗಳು ಹಾಗೂ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯ ವಿಚಾರ ತಿಳಿದು ಅತ್ಯಂತ ವಿಷಾದವಾಯಿತು. ಮೊನ್ನೆಯಷ್ಟೇ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದೆವು. ಶ್ರೀಗಳ ಭೇಟಿ ಮಾಡಿದ್ದ ನೆನಪು ಇನ್ನೂ ಕೂಡ ಮರೆಯಲು ಸಾಧ್ಯವಿಲ್ಲ.
ಶ್ರೀಗಳು 111 ವರ್ಷ ಬಾಳಿ ಬದುಕಿದ್ದು ದಾಖಲೆ. ನಿಯಮಿತವಾದ ಜೀವನ ಪದ್ಧತಿ, ಅನುಸರಿಸಿಕೊಂಡು ಬಂದ ಪೂಜಾ ವಿಧಾನಗಳು, ಎಲ್ಲಾ ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಇದರ ಕಾರಣದಿಂದಾಗಿ ಶ್ರೀಗಳು ಧೀರ್ಘಾಯುಷಿಗಳಾಗಿದ್ದರು.

ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಶ್ರೀಗಳು ಅಗಲಿದ್ದು ಈ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅಗಲಿದ ಶ್ರೀಗಳ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.












Click it and Unblock the Notifications