• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತೀಶ್ ಜಾರಕಿಹೊಳಿ, ಕಾಂಗ್ರೆಸ್‌ಗೆ ಹಿಂದೂಗಳ ಸಾಮರ್ಥ್ಯ ತೋರಿಸಬೇಕು: ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 9 : ಸತೀಶ್ ಜಾರಕಿಹೊಳಿ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಅವರು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅವರಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಪದ ಅಶ್ಲೀಲ ಅರ್ಥವನ್ನು ಹೊಂದಿದೆ ಎಂದು ಹೇಳುವ ಮೂಲಕ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರಿಗೆ ಹಾಗೂ ಮರಾಠಿಗರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ವಿಜಯನಗರ ಅರಸರು ತಮ್ಮನ್ನು ಹಿಂದೂ ರಾಜ ಸೂರತ್ರಾಣ ಎಂದು ಕರೆಸಿಕೊಂಡಿದ್ದರು.

Recommended Video

   Sania Mirza Shoaib Malik: ಸ್ಟಾರ್ ಕ್ರಿಡಾಪಟುಗಳ ಬಾಳಲ್ಲಿ ಬಿರುಗಾಳಿ

   ಹಿಂದೂ ವಿವಾದ: ತನಿಖಾ ಸಮಿತಿ ರಚಿಸಲು ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರಹಿಂದೂ ವಿವಾದ: ತನಿಖಾ ಸಮಿತಿ ರಚಿಸಲು ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರ

   ವಿಜಯನಗರ ಸಾಮ್ರಾಜ್ಯವನ್ನು ಆಳಿದ ರಾಜರಿಗೆ ಮತ್ತು ತಾವು ಹುಟ್ಟಿದ ಪಾಳೇಗಾರ ನಾಯಕ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅಲ್ಲದೇ, ನೇತಾಜಿ ಸುಭಾಷ್‍ಚಂದ್ರ ಬೋಸ್ ತಮ್ಮ ಸೈನ್ಯಕ್ಕೆ ಆಝಾದ್ ಹಿಂದ್ ಫೌಜ್ ಎಂದು ಹೆಸರಿಟ್ಟಿದ್ದರು. ನಮ್ಮ ದೇಶದ ಸೈನಿಕರೂ ಜೈ ಹಿಂದ್‌ ಎಂದು ಘೋಷಣೆ ಕೂಗುತ್ತಾರೆ. ಹೀಗಿರುವಾಗ ಹಿಂದೂ ಪದ ಅಶ್ಲೀಲ ಪದ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಅಪಮಾನ ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

   ಜಾರಕಿಹೊಳಿ, ಕಾಂಗ್ರೆಸ್‌ಗೆ ಬುದ್ದಿ ಕಲಿಸಬೇಕು

   ಜಾರಕಿಹೊಳಿ, ಕಾಂಗ್ರೆಸ್‌ಗೆ ಬುದ್ದಿ ಕಲಿಸಬೇಕು

   ಸತೀಶ್ ಜಾರಕಿಹೊಳಿ ತಮ್ಮ ತಪ್ಪಿಗೆ ಕ್ಷಮೆಯಾಚಿಸುವುದಿಲ್ಲ ಎಂದು ದುರಂಕಾರದ ಹೇಳಿಕೆ ನೀಡಿದ್ದರು. ಹಿಂದೂ ಎಂಬ ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಅವರಿಗೆ ಮತ ಹಾಕದೇ ಅವರಿಗೆ ಮತ್ತು ನೀಚ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಬುದ್ಧಿ ಕಲಿಸಬೇಕು. ಹಿಂದೂಗಳ ಸಾಮರ್ಥ್ಯ ಏನೆಂದು ತೋರಿಸಬೇಕು ಎಂದು ಗುಡುಗಿದ್ದಾರೆ.

   ಸತೀಶ್ ಜಾರಕಿಹೊಳಿ ಬಹುಶಃ ಇತಿಹಾಸ ಓದಿಲ್ಲ: ಬಿ.ಸಿ ಪಾಟೀಲ್ಸತೀಶ್ ಜಾರಕಿಹೊಳಿ ಬಹುಶಃ ಇತಿಹಾಸ ಓದಿಲ್ಲ: ಬಿ.ಸಿ ಪಾಟೀಲ್

   15 ಲಕ್ಷಕ್ಕೆ ಬೇಡಿಕೆಯಿಡುವ ದುಸ್ಥಿತಿ ಬೈರತಿಗೆ ಬಂದಿಲ್ಲ

   15 ಲಕ್ಷಕ್ಕೆ ಬೇಡಿಕೆಯಿಡುವ ದುಸ್ಥಿತಿ ಬೈರತಿಗೆ ಬಂದಿಲ್ಲ

   ಸಚಿವ ಭೈರತಿ ಬಸವರಾಜ್ ಹಣದ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಅವರು ಅಗರ್ಭ ಶ್ರೀಮಂತರು, ನೂರಾರು ಎಕರೆ ಜಮೀನಿದೆ. ಹೀಗಿರುವಾಗ 15 ಲಕ್ಷ ಹಣಕ್ಕೆ ಬೇಡಿಕೆ ಇಡುವ ದು:ಸ್ಥಿತಿ ಬಂದಿಲ್ಲ. ತನಿಖೆಯಿಂದ ಸತ್ಯಾಸತ್ಯಾತೆ ಹೊರಬರಲಿದೆ ಎಂದರು.

   ದತ್ತಪೀಠಕ್ಕೆ ಶಕ್ತಿ ತುಂಬುತ್ತೇವೆ

   ದತ್ತಪೀಠಕ್ಕೆ ಶಕ್ತಿ ತುಂಬುತ್ತೇವೆ

   ದತ್ತಪೀಠದಲ್ಲಿ ಅರ್ಚಕರ ನೇಮಕ ಸಂಬಂಧ ಪ್ರತಿಕ್ರಿಯಿಸಿ, ಸರ್ಕಾರ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಎಲ್ಲವು ನಿಯಮಬದ್ಧವಾಗಿ ಮಾಡಬೇಕಿದೆ. ಭಾವನಾತ್ಮಕವಾಗಿ ಗಡುವು ನೀಡುವುದು ಬೇರೆ. ಕಾನೂನು ಬದ್ಧವಾಗಿ ಮಾಡುವುದು ಬೇರೆ. ಶ್ರೀರಾಮ ಸೇನೆ ಭಾವನೆ ಬೇರೆ ಅಲ್ಲ, ನಮ್ಮ ಭಾವನೆ ಬೇರೆ ಅಲ್ಲ. ದತ್ತಪೀಠ ಮರೆತಿಲ್ಲ, ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.

   ದಲಿತರು ನನ್ನ ಹೃದಯದಲ್ಲಿದ್ದಾರೆ

   ದಲಿತರು ನನ್ನ ಹೃದಯದಲ್ಲಿದ್ದಾರೆ

   ಬಿಜೆಪಿ ದಲಿತರ ಜೊತೆಗಿಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ದಲಿತರು ಬಿಜೆಪಿ ಹೃದಯದಲ್ಲಿದ್ದಾರೆ. ನನ್ನ ಹೃದಯದಲ್ಲಿದ್ದಾರೆ. ನನ್ನ 34 ವರ್ಷ ರಾಜಕಾರಣದಲ್ಲಿ ಯಾವತ್ತು ತಾರತಮ್ಯ ಮಾಡಿಲ್ಲ ಎಂದು ಸಿಟಿ ರವಿ ತಿಳಿಸಿದರು.

   ಚಿಕ್ಕಮಗಳೂರು ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಆರೋಪಿ ಸುತ್ತಾರೆ. ಜಿಲ್ಲೆಗೆ ಮೆಡಿಕಲ್ ಕಾಲೇಜು ತರಲಾಗಿದೆ. ಕಾಂಕ್ರಿಟ್ ರಸ್ತೆ ನಿಮಾರ್ಣ ಮಾಡ ಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಇವೆಲ್ಲವು ಶಾಶ್ವತ ಅಭಿವೃದ್ಧಿ ಕಾಮ ಗಾರಿಗಳಲ್ಲವೇ ಎಂದು ಪ್ರಶ್ನಿಸಿದರು.

   ಸತೀಶ್ ಜಾರಕಿಹೊಳಿ
   Know all about
   ಸತೀಶ್ ಜಾರಕಿಹೊಳಿ
   English summary
   Satish Jarkiholi has insulted the Hindu community, People need to teach him and the Congress party, what is the strength of Hindus, said BJP National General Secretary CT Ravi in Chikmagaluru,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X