Video: ಅಮೂಲ್ಯ ಲಿಯೋನಾ ಹಿನ್ನೆಲೆಯನ್ನೇ ಪ್ರಶ್ನೆ ಮಾಡಿದ ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಫೆಬ್ರವರಿ.20: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳನ್ನು ಭಾರತದಲ್ಲಿ ಇಟ್ಟುಕೊಳ್ಳುವ ಅಗತ್ಯವೇ ಇಲ್ಲ. ಇಂಥವರನ್ನೆಲ್ಲಾ ಪಾಕಿಸ್ತಾನಕ್ಕೆ ಅಟ್ಟಬೇಕು. ಅಲ್ಲಿರುವ ನರಕದ ಸ್ಥಿತಿ ಬಗ್ಗೆ ಇಂಥವರಿಗೆ ಅರಿವಾಗಬೇಕು ಎಂದು ಬಿಜೆಪಿ ಶಾಸಕ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಯಾರು, ಆಕೆಯ ಹಿನ್ನೆಲೆ ಏನು, ಆಕೆ ಯಾವ ಸಂಘಟನೆಗೆ ಸೇರಿದವಳು, ಆ ಸಂಘಟನೆಯ ಮುಖ್ಯ ಉದ್ದೇಶ ಏನು ಎಂಬುದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಸಿ ಟಿ ರವಿ ಆಗ್ರಹಿಸಿದ್ದಾರೆ.
ಭಾರತದಂತಾ ಸ್ವರ್ಗದಲ್ಲಿ ಇರುವವರಿಗೆ ನರಕದ ಅನುಭವ ಆಗಿಲ್ಲ. ಪಾಕಿಸ್ತಾನ್ ದಂತಾ ನರಕದ ಬಗ್ಗೆ ಇಂಥವರಿಗೆ ಅರಿವಾಗಬೇಕು. ಅಂಥ ನರಕದಲ್ಲೇ ಇಂಥವರು ಬಿದ್ದು ಸಾಯಬೇಕು. ಆ ನರಕದ ಅನುಭವ ಇವರಿಗೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೂಲ್ಯ ಲಿಯೋನಾ ವಿರುದ್ಧ ಸಚಿವ ಸಿಟಿ ರವಿ ಆಕ್ರೋಶ@CTRavi_BJP #Bengaluru #PakistanZindabad #AmulyaLeona pic.twitter.com/WF2g5Hf3bf
— Oneindia Kannada (@OneindiaKannada) February 20, 2020

ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ:
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ವೇದಿಕೆಯಲ್ಲೇ ದಿಢೀರನೇ ಪ್ರತ್ಯಕ್ಷಳಾದ ಅಮೂಲ್ಯ ಲಿಯೋನಾ ಮೈಕ್ ಹಿಡಿದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಈ ಘೋಷಣೆ ಕೂಗಿದ ಯುವತಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಇದೀಗ ಶಾಸಕ ಸಿ ಟಿ ರವಿ ಪೊಲೀಸರಿಗೆ ಆಗ್ರಹಿಸಿದ್ದಾರೆ.












Click it and Unblock the Notifications