• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಸಂಸತ್ ಭವನ; ಶೃಂಗೇರಿ ಪುರೋಹಿತರಿಂದ ಧಾರ್ಮಿಕ ವಿಧಿವಿಧಾನ!

|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 10 : ನವದೆಹಲಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಇಂದು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಲಿದ್ದು, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ನೂತನ ಸಂಸತ್ ಭವನ ನಿರ್ಮಾಣಕ್ಕೆ ಕರ್ನಾಟಕದ ನಂಟಿದೆ. ಗುರುವಾರ ಮಧ್ಯಾಹ್ನ 12.40 ರಿಂದ 1.15ರ ತನಕ ನಡೆಯುವ ಎಲ್ಲಾ ಕಾರ್ಯಕ್ರಮದ ಉಸ್ತುವಾರಿಯನ್ನು ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಹಿಸಿಕೊಂಡಿದ್ದಾರೆ.

ನೂತನ ಸಂಸತ್ ಭವನ ಕಟ್ಟಡಕ್ಕೆ ಮೋದಿಯಿಂದ ಶಂಕುಸ್ಥಾಪನೆ ನೂತನ ಸಂಸತ್ ಭವನ ಕಟ್ಟಡಕ್ಕೆ ಮೋದಿಯಿಂದ ಶಂಕುಸ್ಥಾಪನೆ

ನೂತನ ಸಂಸತ್ ಭವನ ನಿರ್ಮಾಣದ ಶಂಕು ಸ್ಥಾಪನೆಗೆ ಮೊದಲು ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಪುರೋಹಿತರು ನಡೆಸಿಕೊಡಲಿದ್ದಾರೆ. 6 ಪುರೋಹಿತರು ಇದಕ್ಕಾಗಿ ನವದೆಹಲಿಗೆ ತೆರಳಿದ್ದಾರೆ.

ನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆನೂತನ ಸಂಸತ್ ಭವನ ಕಟ್ಟಡ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಶೃಂಗೇರಿಯಿಂದ ಪುರೋಹಿತರನ್ನು ಕರೆಸಿದ್ದಾರೆ. ಶೃಂಗೇರಿ ಮಠದ ಸ್ವಾಮೀಜಿಗಳನ್ನು ಸಂಪರ್ಕಿಸಿದ್ದ ಜೋಶಿ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದರು.

ಹೊಸ ಸಂಸತ್ ಭವನ ಶಂಕುಸ್ಥಾಪನೆ: ಕಟ್ಟಡದ ವಿಶೇಷತೆಯೇನು? ಹೊಸ ಸಂಸತ್ ಭವನ ಶಂಕುಸ್ಥಾಪನೆ: ಕಟ್ಟಡದ ವಿಶೇಷತೆಯೇನು?

ಒಟ್ಟು 6 ಮಂದಿಯ ತಂಡ ಭಾಗಿ

ಒಟ್ಟು 6 ಮಂದಿಯ ತಂಡ ಭಾಗಿ

ಶೃಂಗೇರಿ ಮಠದ ಸ್ವಾಮೀಗಳು ಪುರೋಹಿತರಾದ ಟಿ. ವಿ. ಶಿವಕುಮಾರ ಶರ್ಮ, ಕೆ. ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಕೆ. ಎಸ್. ಗಣೇಶ ಸೋಮಯಾಜಿ, ಸಿ. ನಾಗರಾಜ ಅಡಿಗ ಅವರನ್ನು ಮುಖ್ಯ ಪುರೋಹಿತರಾಗಿ ಆಯ್ಕೆ ಮಾಡಿ ಕಳಿಸಿದ್ದಾರೆ. ದೆಹಲಿಯ ಶೃಂಗೇರಿ ಮಠದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ರಾಘವೇಂದ್ರ ಭಟ್ಟ ಮತ್ತು ಋಷ್ಯಶೃಂಗ ಅವರು ಪೂಜೆಯಲ್ಲಿ ಸಹಾಯ ಮಾಡಲಿದ್ದಾರೆ. ಒಟ್ಟು 6 ಮಂದಿಯ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡಲಿದೆ.

ಅಗತ್ಯ ಸಿದ್ಧತೆ ನಡೆದಿದೆ

ಅಗತ್ಯ ಸಿದ್ಧತೆ ನಡೆದಿದೆ

ಗುರುವಾರ ಮಧ್ಯಾಹ್ನ 12.40 ರಿಂದ 1.15ರ ತನಕ ನೂತನ ಸಂಸತ್ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯಲಿದೆ. ಮಂಗಳವಾರವೇ ಶೃಂಗೇರಿಯ ಪುರೋಹಿತರು ದೆಹಲಿಗೆ ಆಗಮಿಸಿದ್ದಾರೆ. ಬುಧವಾರದಂದು ಸ್ಥಳಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ತಯಾರಿಯನ್ನು ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ.

ಯಾವ-ಯಾವ ಕಾರ್ಯಕ್ರಮಗಳು

ಯಾವ-ಯಾವ ಕಾರ್ಯಕ್ರಮಗಳು

ಹೊಸ ಸಂಸತ್ ಭವನ ಶಂಕುಸ್ಥಾಪನೆ ಅಂಗವಾಗಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಆದಿಶೇಷ ಪೂಜೆ, ಅನಂತ ಪೂಜೆ, ವರಾಹ ಪೂಜೆ ಮತ್ತು ಭುವನೇಶ್ವರಿ ಪೂಜೆ ನಡೆಯಲಿದೆ. ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಶೃಂಗೇರಿಯಿಂದ ಶಂಕು ತರಲಾಗಿದೆ ನವರತ್ನ ಪೀಠ

ಶೃಂಗೇರಿಯಿಂದ ಶಂಕು ತರಲಾಗಿದೆ ನವರತ್ನ ಪೀಠ

ಶಂಕು ಸ್ಥಾಪನೆ ಕಾರ್ಯಕ್ರಮಕ್ಕಾಗಿಯೇ ಮರದಿಂದ ಮಾಡಿರುವ ವಿಶೇಷ ಶಂಕುವನ್ನು ದೆಹಲಿಗೆ ಶೃಂಗೇರಿಯಿಂದ ತರಲಾಗಿದೆ. ಶಂಕುಸ್ಥಾಪನೆ ಸಮಯದಲ್ಲಿ ಅದನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತೆ.

ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ :

English summary
Prime minister Narendra Modi will lay foundation stone for new parliament building in New Delhi on December 10, 2020. 6 priest from Sringeri, Karnataka will perform pooja for building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X