• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೀರಗಾಸೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಶಾಸಕ ಸಿಟಿ ರವಿ

By ಚಿಕ್ಕಮಗಳೂರು ಪ್ರತಿನಿಧಿ
|
   ವೀರಗಾಸೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಶಾಸಕ ಸಿಟಿ ರವಿ | Oneindia Kannada

   ಚಿಕ್ಕಮಗಳೂರು, ಡಿಸೆಂಬರ್ 21: ವಿಎಚ್ ಪಿ ಹಾಗೂ ಭಜರಂಗದಳ ವತಿಯಿಂದ ನಡೆಯುತ್ತಿರುವ ದತ್ತಜಯಂತಿ ಶೋಭಾಯಾತ್ರೆ ವೇಳೆ ಶಾಸಕ ಸಿಟಿ ರವಿ ವೀರಗಾಸೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

   ದತ್ತ ಭಕ್ತರು ಭಿಕ್ಷಾಟನೆ ಮಾಡ್ತಾರೆಂಬ ಸಿಎಂ ಹೇಳಿಕೆಗೆ ಶಾಸಕ ಸಿಟಿ ರವಿ ಕಿಡಿ

   ನಗರದ ಕಾಮಧೇನು ಗಣಪತಿ ದೇವಾಲಯದ ಬಳಿ ದತ್ತಜಯಂತಿ ಶೋಭಾಯಾತ್ರೆಗೆ ಚಾಲನೆ ನೀಡಿದ ಅವರು ವೀರಭದ್ರನ ವೇಷಧಾರಿಗಳ ಜೊತೆ ವೀರಗಾಸ ನೃತ್ಯ‌ ಮಾಡಿದ್ದು ವಿಶೇಷವಾಗಿದ್ದು, ಈ ನೃತ್ಯದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

   ಕೇಸರಿಮಯವಾದ ಚಿಕ್ಕಮಗಳೂರು:ಇಂದಿನಿಂದ ದತ್ತಮಾಲಾ ಅಭಿಯಾನಕ್ಕೆ ಚಾಲನೆ

   ನಿನ್ನೆಯಿಂದ ಆರಂಭವಾದ ದತ್ತ ಜಯಂತಿ ಅಂಗವಾಗಿ ಇಂದು ಮಾಲಾಧಾರಿಯಾಗಿ ಸಿ.ಟಿ ರವಿ ಭಿಕ್ಷಾಟನೆ ಸಹ ಮಾಡಿದರು. ಚಿಕ್ಕಮಗಳೂರು ನಗರದ ನಾರಾಯಣಪುರದ 20ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿದರು. ಇದೇ ವೇಳೆ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಸಾಥ್ ನೀಡಿದರು.

   ಮಾಲಾಧಾರಿ ದತ್ತ ಭಕ್ತರು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಭಕ್ತಾಧಿಗಳನ್ನು ದತ್ತ ಜಯಂತಿಗೆ ಆಹ್ವಾನಿಸಿದರು.

   English summary
   MLA CT Ravi danced Veeragase in Datta jayanti Shobha yatra time.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X