'ಹಿಟ್ಟು ಹಳಸಿತ್ತು, ಡ್ಯಾಶ್ ಹಸಿದಿತ್ತು' ಕಾಂಗ್ರೆಸ್ ಕುರಿತು ಸಿ.ಟಿ ರವಿ ವ್ಯಂಗ್ಯದ ಮಾತು

ಚಿಕ್ಕಮಗಳೂರು, ಆಗಸ್ಟ್ 24: ಎಐಸಿಸಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರು "ಹಿಟ್ಟು ಹಳಸಿತ್ತು, ಡ್ಯಾಶ್ ಹಸಿದಿತ್ತು..' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Recommended Video

      Sindhya ತೊರೆದ ನಂತರ ಕಾಂಗ್ರೆಸ್ ಪುನರುಜ್ಜೀವನಗೊಂಡಿದೆ-Digvijay singh!?! | Oneindia Kannada

      ಕಾಂಗ್ರೆಸ್ ಪಕ್ಷದವರಿಗೆ ಗಾಂಧಿ ಕುಟುಂಬವನ್ನು ಬಿಟ್ಟರೆ ಬೇರೆ ಗತಿಯಿಲ್ಲ, ಹಾಗಾಗಿಯೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇವಲ ಗಾಂಧಿ ಕುಟುಂಬವನ್ನೇ ಅವಲಂಬಿಸಿಕೊಂಡಿದ್ದಾರೆ. ಕಾಂಗ್ರೆಸ್ ನವರು ಗಾಂಧಿ ಕುಟುಂಬದ ಮೇಲೆ ಅವಲಂಬಿತರಾಗಿದ್ದಾರೆ ಎಂದು ಸಚಿವ ಸಿ.ಟಿ ರವಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಹೇಳಿಕೆ ನೀಡಿದರು.

      ಇದೇ ಸಂದರ್ಭದಲ್ಲಿ ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ಡಿಕೆಶಿ ಅವರು ಕೊತ್ವಾಲ್ ರಾಮಚಂದ್ರ ಶಿಷ್ಯನ ಮನಸ್ಥಿತಿಯಿಂದ ಹೊರಬಂದಿಲ್ಲ ಟೀಕಿಸಿದರು.

       Chikkamagaluru; Minister CT Ravi Has React On AICC President Position Crisis

      ತನಿಖೆ ನಡೆಯುವ ಹಂತದಲ್ಲೇ ಧಮ್ಕಿ ಹಾಕುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ತಾವು ಈಗಲೂ ಕೊತ್ವಾಲ್ ರಾಮಚಂದ್ರನ ಶಿಷ್ಯ ಅಂತ ತೋರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.

      ನಮ್ಮ ಸರ್ಕಾರದಲ್ಲಿ ಗೂಂಡಾಗಳಂತೆ ಧಮ್ಕಿ ಹಾಕಲು ಅವಕಾಶವಿಲ್ಲ. ಡಿಕೆಶಿ ಗೂಂಡಾ ಮನಸ್ಥಿತಿಯಿಂದ ಹೊರಬರಬೇಕು, ಇಲ್ಲದಿದ್ದರೆ ನಿಮಗೂ, ನಿಮ್ಮ ಪಕ್ಷಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+