ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡೂರು; ಶಿಕ್ಷಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಅಧಿಕಾರಿ ಲೋಕಾಯುಕ್ತ ವಶಕ್ಕೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌, 18; ಲಂಚ ಪಡೆಯುವಾಗ ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎನ್. ಜಯಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿಕ್ಷಕನನ್ನು ಶಾಲೆಗೆ ನಿಯೋಜನೆ ಮಾಡಿಕೊಳ್ಳಲು ಬಿಇಒ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಲೋಕಾಯುಕ್ತ ಬಯಲಿಗೆಳೆದಿದೆ. ಶಿಕ್ಷಕ ರಾಜಪ್ಪ ಅವರಿಂದ ಬಿಇಒ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದೆ.

ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಡೂರು ತಾಲೂಕಿನ ಜಿ.ತಿಮ್ಮಾಪುರ ಗೇಟ್‌ನಲ್ಲಿ ಶಿಕ್ಷಕ ರಾಜಪ್ಪನಿಂದ ಲಂಚ ಪಡೆಯುವಾಗ ಬಿಇಓ ತಗ್ಲಾಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಲಂಚ ಪ್ರಕರಣ; ಸಚಿವ ಎಸ್‌ಟಿ ಸೋಮಶೇಖರ್ ವಜಾಗೆ ಕಾಂಗ್ರೆಸ್ ಆಗ್ರಹ ಲಂಚ ಪ್ರಕರಣ; ಸಚಿವ ಎಸ್‌ಟಿ ಸೋಮಶೇಖರ್ ವಜಾಗೆ ಕಾಂಗ್ರೆಸ್ ಆಗ್ರಹ

ಮಂಗಳೂರಿನಲ್ಲಿ ಲೋಕಾಯುಕ್ತ ದಾಳಿ

ಈ ಹಿಂದೆ ಇದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚಣೆಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಸಹಾಯಕ ವಾನಂದ ನಾಟೇಕರ್ ಎಂಬವರನ್ನು ಬಂಧಿಸಿದ್ದರು. ಮಿನಿ ವಿಧಾನಸೌಧದ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಸಹಾಯಕ ಶಿವಾನಂದ ನಾಟೇಕರ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು. ಲೋಕಾಯುಕ್ತ ಅಧಿಕಾರಿಗಳ ವಿಚಾರಣೆಯ ವೇಳೆ ಲಂಚದ ಹಣವನ್ನು ತಹಶೀಲ್ದಾರ್ ಪರವಾಗಿ ತಾನು ಪಡೆದಿದ್ದು ಎಂದು ಶಿವಾನಂದ ತಿಳಿಸಿದ್ದ. ಕಾರಣ ಅವರನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಲೋಕಾಯುಕ್ತ ಎಸ್‌ಪಿ ಲಕ್ಷ್ಮಿ ಗಣೇಶ್ ತಿಳಿಸಿದ್ದರು.

Lokayukta raid on Kadur BEO officer

ಮೂಲತಃ ವಿಜಯಪುರ ನಿವಾಸಿ ಶಿವಾನಂದ ನಾಟೇಕರ್ ಮಿನಿ ವಿಧಾನಸೌಧದಲ್ಲಿ ಪ್ರಥಮ ದರ್ಜೆ ನೌಕರನಾಗಿದ್ದ. 73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಕಾವೂರಿನಲ್ಲಿರುವ ತಮ್ಮ ಜಾಗವನ್ನು ಮಾರಾಟ ಮಾಡಲು ಎನ್‌ಒಸಿ ಪಡೆಯಲು ಬಂದಿದ್ದ ಸಂದರ್ಭ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿತ್ತು.

https://kannada.oneindia.com/news/india/monday-as-worst-day-of-the-week-netizens-reacted-to-guinness-world-records-declares-271942.html

ಆರೋಪಿ ಶಿವಾನಂದ್ 2 ಸಾವಿರ ರೂಪಾಯಿ ಲಂಚ ಪಡೆದು ಬಳಿಕ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದ ಎಂದು ಮಾಹಿತಿ ಬಯಲಾಗಿತ್ತು. ಆದರೂ ಹಿರಿಯ ನಾಗರಿಕರು ವಿನಂತಿ ಮಾಡಿದಾಗ 5ಸಾವಿರ ರೂಪಾಯಿಗೆ ಒಪ್ಪಿಗೆ ಸೂಚಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆಯೇ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಅಧಿಕಾರಿಗಳು, ಶಿವಾನಂದ 4700 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್‌ಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಂತೆ ಡಿವೈಎಸ್‌ಪಿ ಕಲಾವತಿ ಮತ್ತು ಚೆಲುವರಾಜ, ಇನ್‌ಸ್ಪೆಕ್ಟರ್ ಅಮಾನುಲ್ಲಾ ಎ. ಜಯರಾಮ ಡಿ. ಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

English summary
Lokayukta officials raid on BEO officer K. N.Jayanna,he was caught while receiving bribe near G.Timmapura Gate of Kadur Taluk, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X