ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಲೀಡ್‌ನಲ್ಲಿ ಇಲ್ಲ: ಸಿ.ಟಿ ರವಿ
ಚಿಕ್ಕಮಗಳೂರು, ಜೂನ್ 04: 2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಭರ್ಜರಿಯಾಗಿ ನಡೆಯುತ್ತಿದ್ದು, ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಈ ಬಗ್ಗೆ ಮಾಜಿ ಸಚಿವ ಸಿ.ಟಿ ರವಿ ಮಾತನಾಡಿದ್ದು, ಬಿಜೆಪಿ ನಾವು ನಿರೀಕ್ಷೆ ಮಾಡಿದಷ್ಟು ಲೀಡ್‌ನಲ್ಲಿ ಎಂದಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಜನ ಮನ್ನಣೆ ನೀಡಿದ್ದಾರೆ. ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ನಾವೀಗ ಇಲ್ಲ. ನಾವು ಬಿಜೆಪಿ ಏಕಾಂಕಿಯಾಗಿ ಮೂನ್ನೂರಕ್ಕೂ ಹೆಚ್ಚು ಸ್ಥಾನ ಮುನ್ನೂರೈವತ್ತು ಅಂದುಕೊಳ್ಳುತ್ತಿದ್ದೇವು. ಆ ಸ್ಥರದಲ್ಲಿ ಲೀಡ್ ಇಲ್ಲ. ಆದರೆ ಮತ್ತೊಮ್ಮೆ ಮೋದಿ ಎನ್ನುವುದಕ್ಕೆ ಮನ್ನಣೆ ಕೊಟ್ಟಿದ್ದಾರೆ ಎಂದರು.

ಇನ್ನು ಆರಂಭಿಕ ಹಂತ ಇರುವುದರಿಂದ ಈಗಲೇ ಹೇಳಲಾಗುವುದಿಲ್ಲ. ಒಂದು ಗಂಟೆ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಅದಾಗಿಯೂ ವಿಶ್ವಾಸ ಇದೆ. ಈ ಹಿಂದೆ ಹತ್ತಂಬತ್ತು ಮತ್ತು ಹದಿನಾಲ್ಕರ ಈ ಚುನಾವಣೆ ಸಂದರ್ಭದಲ್ಲಿಯೂ ಹತ್ತು ಹನ್ನೊಂದು ಗಂಟೆಗೆ ಇದೇ ವಾತಾವರಣ ಇತ್ತು. ಆಮೇಲೆ ಒಂದು ಗಂಟೆ ನಂತರ, ಎರಡು ಗಂಟೆ ನಂತರ ಬಹಳ ಸ್ಪಷ್ಟವಾಗಿ ಬಿಜೆಪಿ ಸ್ವತಂತ್ರವಾಗಿ ಗಳಿಸಿಕೊಳ್ಳುವುದರ ಕಡೆ, ಎನ್‌ಡಿಎ ದಾಖಲೆಯ ಸೀಟುಗಳನ್ನು ಪಡೆಯುವತ್ತ ಹೆಜ್ಜೆ ಹಾಕಿತ್ತು ಎಂದು ಹೇಳಿದರು.
ಈಗಲೂ ಹಾಗೆಯೇ ಆಗುವ ವಿಶ್ವಾಸ ಇದೆ. ಈಗಲೇ ಯಾವುದೇ ಕ್ಷೇತ್ರದ ಬಗ್ಗೆ ಹೀಗೆ ಅಂತಾ ಹೇಳುವುದು ಕ್ಷೇತ್ರವಲ್ಲ. ಕರ್ನಾಟಕವೂ ಸೇರಿದಂತೆ ದಕ್ಷಿಣದಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿ ಹಾಗೂ ಎನ್‌ಡಿಎ ಕಡೆಗೆ ಒಲವು ತೋರಿಸಿರುವುದು ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications