ಅಪರಿಚಿತ ವಾಹನ ಡಿಕ್ಕಿ, ಚಿರತೆ ಮರಿ ಸಾವು
ಚಿಕ್ಕಮಗಳೂರು, ಜೂನ್ 29: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಿಳಗುಳ ಬಳಿಯ ಕೊಲ್ಲಿಬೈಲು ಗ್ರಾಮದಲ್ಲಿ ನಡೆದಿದೆ.
ಚಿರತೆ ರಾತ್ರಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ನಿನ್ನೆಯಷ್ಟೇ ಬಿಳಗುಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಡಿಎಫ್ ಒ ಮನೆ ಮುಂದೆ ಹಾಗೂ ವಿಜಯ ಬ್ಯಾಂಕ್ ಮುಂಭಾಗ ಚಿರತೆ ಓಡಾಡಿದ್ದು, ಅದರ ಹೆಜ್ಜೆ ಗುರುತುಗಳು ಪತ್ತೆ ಆಗಿದ್ದವು. ಈಗ ಅಪಘಾತದಲ್ಲಿ ಸಾವನ್ನಪ್ಪಿರುವ ಚಿರತೆ ಅದೇ ಆಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications