ಕುಂದೂರು: ಮೊದಲಿಗೆ ಕೆಂಪಮ್ಮ ದೇವಸ್ಥಾನದಲ್ಲಿ 15 ವರ್ಷಕೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಈ ಹುತ್ತ ಈಗ 5 ವರ್ಷದಲ್ಲೇ ಪ್ರತ್ಯಕ್ಷ

ಚಿಕ್ಕಮಗಳೂರು, ಜೂನ್‌, 08: ಕಡೂರು ತಾಲೂಕಿನ ಕುಂದೂರು ಗ್ರಾಮದಲ್ಲಿನ ಕೆಂಪಮ್ಮ ದೇವಿ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ದೇವರ ಮೂರ್ತಿಯನ್ನು 15 ವರ್ಷಕ್ಕೊಮ್ಮೆ ಹುತ್ತವೊಂದು ಆವರಿಸುತ್ತಿತ್ತು. ಆದರೆ ಇದೀಗ 5 ವರ್ಷದಲ್ಲೇ ದೇವಸ್ಥಾನದಲ್ಲಿ ಹುತ್ತ ಕಾಣಿಕೊಂಡಿದ್ದು, ಇದು ಅಲ್ಲಿನ ಜನರನ್ನು ಅಚ್ಚರಿಗೊಳಗಾಗುವಂತೆ ಮಾಡಿದೆ.

ಈ ಹುತ್ತುವು ದಿನೇ ದಿನೇ ಬೆಳೆಯುತ್ತಲೇ ಇದೆ. ಗರ್ಭ ಗುಡಿಯಲ್ಲಿರುವ ದೇವರ ಮೂರ್ತಿ ತುಂಬಾ ಬೆಳೆಯುತ್ತಿದ್ದಂತೆ ಈ ಹುತ್ತವನ್ನು ವಿಸರ್ಜನೆ ಮಾಡಲೇಬೇಕಾಗುತ್ತದೆ. ಮೊದಲು ಇದು 15 ವರ್ಷಕ್ಕೊಮ್ಮೆ ಈ ರೀತಿ ಅಚ್ಚರಿ ಮೂಡಿಸುತ್ತಿತ್ತು, ಆದರೆ ಈಗ 5 ವರ್ಷದಲ್ಲಿ ಹುತ್ತ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Kundur: Snake burrow found Within 5 years in Kempamma Devi temple

ಇನ್ನು ಹುತ್ತ ಅವರಿಸುತ್ತಿದ್ದಂತೆ ಗರ್ಭಗುಡಿಯಲ್ಲಿರುವ ವಿಗ್ರಹವನ್ನು ವಿರ್ಸಜನೆ ಮಾಡಲಾಗುತ್ತಿತ್ತು. ಈ ಬಾರಿ ಹುತ್ತ ಅವರಿಸಿದ ನಂತರ ಕಲ್ಲಿನ ಮೂರ್ತಿ ಮಾಡಿಸುವಂತೆ ಅಪ್ಪಣೆ ಕೆಂಪಮ್ಮ ದೇವಿ ಅಪ್ಪಣೆ ನೀಡಿದ್ದಾಳೆ ಎಂದು ಅಲ್ಲಿನ ಭಕ್ತಾದಿಗಳು ಮತ್ತು ಪುಜಾರಿಗಳು ಹೇಳುತ್ತಿದ್ದಾರೆ.

ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ

ಇತ್ತೀಚೆಗಷ್ಟೇ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ ಘಟನೆ ಪಂಡರವಳ್ಳಿಯ ಕಾಫಿತೋಟದಲ್ಲಿ ನಡೆದಿದ್ದು, ಇನ್ನು ಹುಲಿ ದಾಳಿಗೊಳಗಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಮೈಕ್ ಉನ್ನಿಸಾ ಎನ್ನುವ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ್ದು, ಈ ವೇಳೆ ತೋಟದಲ್ಲಿದ್ದ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಪರಾರಿಯಾಗಿದೆ. ಆದರೆ ಹುಲಿ ದಾಳಿಯಿಂದ ಮಹಿಳೆಗೆ ಹಣೆ ಮತ್ತು ಮುಖದ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

8 ವರ್ಷದ ಹಿಂದೆ ಕೂಡ ಪಂಡರವಳ್ಳಿಯ ಕಾಫಿ ತೋಟದಲ್ಲಿ ಹುಲಿ ದಾಳಿಯಿಂದ ಮಹಿಳೆಯೊಬ್ಬರು ಬಲಿಯಾಗಿದ್ದರು. ಇದೀಗ ಮತ್ತೆ ಹುಲಿ ದಾಳಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಇಲ್ಲಿನ ಕೂಲಿ ಕಾರ್ಮಿಕರು ಕಾಫಿತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಕಡವೆಯ ಮೇಲೆ ಸೀಳುನಾಯಿಗಳ ದಾಳಿ

ಹಾಗೆಯೆ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ ವಾಹನಗಳ ಓಡಾಡಟದ ನಡುವೆಯೂ ಸೀಳುನಾಯಿಗಳ ಗುಂಪು ಬೇಟೆಯಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ನಡೆದಿದೆ. ಕೇರಳ ರಸ್ತೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಕಾಡು ಬರಲಿದ್ದು, ಇಲ್ಲಿ ವಾಹನಗಳ ಓಡಾಟವು ಹೆಚ್ಚಿರಲಿದೆ. ಇಲ್ಲಿನ ರಸ್ತೆಬದಿ ಮೇಯುತ್ತಾ ನಿಂತಿದ್ದ ಕಡವೆಯೊಂದರ ಮೇಲೆ 7ಕ್ಕೂ ಹೆಚ್ಚು ಸೀಳುನಾಯಿಗಳು ದಾಳಿ ಮಾಡಿ ತಮ್ಮ ಆಹಾರವನ್ನು ಪಡೆದುಕೊಂಡಿವೆ.

ಆದರೆ, ಪ್ರಾಣ ಕಳೆದುಕೊಳ್ಳುವ ಸಂದರ್ಭದಲ್ಲಿ ಕಡವೆಯ ಅಸಹಾಯಕತೆ ಕಂಡ ಪ್ರಯಾಣಿಕರು ಮರುಗಿದ್ದಾರೆ. ಇನ್ನು, ಈ ರೋಮಾಂಚಕ ದೃಶ್ಯವನ್ನು ರಂಗರಾಜು ಎಂಬವವರು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೆ ಈ ದೃಶ್ಯವು ಮೈ ಝಲ್‌ ಅನ್ನಿಸುವಂತಿದೆ.

ಹುಲಿ ದಾಳಿಗೆ ಇಬ್ಬರು ಬಳಿ

ಒಂದೇ ಕುಟುಂಬದ ಇಬ್ಬರು ಬಲಿ ಅಲ್ಲದೆ ಇತ್ತೀಚೆಗಷ್ಟೇ ಕೊಡಗಿನಲ್ಲಿ ಹುಲಿ ಪ್ರತ್ಯೇಕ ದಾಳಿಗೆ ಒಂದೇ ಕುಟುಂಬದ ಇಬ್ಬರು ಬಲಿಯಾಗಿದ್ದರು. ಕೇರಳದ ಹೊರವಲಯದಲ್ಲಿರುವ ಕೊಡಗಿನ ಪಲ್ಲೇರಿಯಲ್ಲಿ ಹುಲಿ ದಾಳಿಗೆ 75 ವರ್ಷದ ಕೃಷಿ ಕಾರ್ಮಿಕ ರಾಜು ಎಂಬುವವರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ರಾಜು ಅವರ ಮೊಮ್ಮಗ ಚೇತನ್ (18) ಹುಲಿ ದಾಳಿಗೆ ಬಲಿಯಾಗಿದ್ದರು. ನಂತರ ಹುಲಿ ದಾಳಿಯನ್ನು ತಡೆಯಲು ಯತ್ನಿಸಿದ ರಾಜು ಅವರ ಮಗ ಮತ್ತು ಚೇತನ್ ಅವರ ತಂದೆ ಮಧು ಗಾಯಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+