ರಂಭಾಪುರಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಟ ಜಗ್ಗೇಶ್, ಕೋಮಲ್
ಚಿಕ್ಕಮಗಳೂರು, ಜೂನ್ 03: ಕನ್ನಡ ಸಿನಿಮಾ ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಇಂದು ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಜಗ್ಗೇಶ್ ಹಾಗೂ ಕೋಮಲ್ ಇಂದು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡ ನಂತರ ಇದೇ ಸಂದರ್ಭ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೂ ಭೇಟಿ ನೀಡಿ ಗುರುಗಳ ದರ್ಶನವನ್ನು ಪಡೆದುಕೊಂಡರು. ಮಠದಲ್ಲೇ ಕೆಲ ಹೊತ್ತು ತಂಗಿದ್ದು, ಜಗದ್ಗುರುಗಳೊಂದಿಗೆ ಮಾತುಕತೆ ನಡೆಸಿದರು.

ರಂಭಾಪುರಿ ಪೀಠವು ವೀರಶೈವರ ಪೀಠ ಪಂಚಪೀಠಗಳಲ್ಲಿ ಮೊದಲನೆ ಪೀಠವಾಗಿದೆ. ಶ್ರೀ ಜಗದ್ಗುರು ಆದಿಶಂಕರಾಚಾರ್ಯರು ಶೃಂಗೇರಿಯಿಂದ ಕಂಚಿಗೆ ಬರುವ ಸಮಯದಲ್ಲಿ ತಮ್ಮ ಮೊದಲನೆಯ ಶಿಷ್ಯರಾದ ಸುರೇಶ್ವರಾಚಾರ್ಯರನ್ನು ಕರೆದು ಶ್ರೀ ರೇವಣಸಿದ್ಧ ಶಿವಯೋಗಿಗಳಿಂದ ಪ್ರಾಪ್ತವಾದ ಚಂದ್ರಮೌಳೀಶ್ವರಲಿಂಗ ಮತ್ತು ರತ್ಮಗರ್ಭ ಗಣಪತಿಯನ್ನು ಅವರಿಗೆ ಅರ್ಪಿಸಿ, ಅವುಗಳನ್ನು ಪೂಜಿಸುವ ಹೊಣೆಯನ್ನು ಹೊರಿಸಿದರು ಎಂಬ ಪ್ರತೀತಿ ಇದೆ.












Click it and Unblock the Notifications