ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗೆ ಕೊಂಚ ವಿರಾಮ: ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸುವ ಜೀಪ್ Rally

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 5: ಮಳೆಗೆ ಕೊಂಚ ವಿರಾಮ ಸಿಗುತ್ತಿದಂತೆ ಚಿಕ್ಕಮಗಳೂರಿನ ಕೊಪ್ಪ ಸ್ಪೋರ್ಟ್ಸ್ ಕ್ಲಬ್ ನಾಲ್ಕು ಚಕ್ರ ವಾಹನಗಳ Rally ಆಯೋಜನೆ ಮಾಡಿದ್ದರು. ಅಡಿಕೆ ತೋಟ, ಕಾಡಿನೊಳಗೆ ಜೀಪ್ ರೈಡ್ ನಡೆಯಿತು.

ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊರಗಲ್ಲು, ಕೊಕ್ಕೊಡು, ಬಾಳೆಗದ್ದೆ, ಕಿರಣಕೆರೆ, ಚಾವಲ್ಮನೆ ಪ್ರದೇಶಗಳಲ್ಲಿನ ಹಳ್ಳ, ಕಾಡು, ಅಡಿಕೆ ತೋಟಗಳಲ್ಲಿ ಜೀಪ್ Rally ಯನ್ನು ಆಯೋಜಿಸಲಾಗಿತ್ತು. ಈ Rallyಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸಂಪೂರ್ಣ ಲಾಕ್ಡೌನ್ ಗ್ರಾಮ ಚಿಕ್ಕಮಗಳೂರು ಜಿಲ್ಲೆಯಲ್ಲೊಂದು ಸಂಪೂರ್ಣ ಲಾಕ್ಡೌನ್ ಗ್ರಾಮ

ಈ Rallyಗೆ ಅನುಗುಣವಾಗಿ ಹೊಸದೊಂದು ಮಾರ್ಗವನ್ನು ತಯಾರು ಮಾಡಲಾಗಿದ್ದು. ಹೊಂಡ, ಗುಂಡಿ, ದಿಬ್ಬ, ಹಳ್ಳಗಳಲ್ಲಿಯೂ ಸಹ ಸವಾಲೊಡ್ಡುವಂತಹ ಮಾರ್ಗವನ್ನು ರೂಪಿಸಲಾಗಿತ್ತು.

Jeep Rally Held In Chikkamagaluru District

ರೈಡ್‌ನಲ್ಲಿ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ವಾಹನಗಳಲ್ಲಿ ರೇಸ್ ಪ್ರಿಯರು ಭಾಗವಹಿಸಿದ್ದರು. ಕಾಡು, ಹಳ್ಳಗಳಲ್ಲಿ ಕೆಲವು ವಾಹನಗಳು ಸವಾಲನ್ನು ಸ್ವೀಕರಿಸಲಾಗದೇ ಮಾರ್ಗ ಮಧ್ಯೆಯಲ್ಲಿ ಸಿಕ್ಕಿ ಬಿದ್ದ ಘಟನೆಗಳು ನಡೆದಿದೆ. ಈ ವೇಳೆ ವಾಹನವನ್ನು ಹೊರಕ್ಕೆ ತೆಗೆಯಲು ಟ್ರ್ಯಾಕ್ಟರ್ ಹಾಗೂ ಜೆಸಿಬಿಯ ಸಹಾಯವನ್ನು ಸಹ ಪಡೆಯಲಾಯಿತು.

Jeep Rally Held In Chikkamagaluru District

ಕಾಡಿನೊಳಗೆ ವಾಹನಗಳ ಕರ್ಕಶವಾದ ಶಬ್ಧಗಳು ಹಾಗೂ ಜೀಪ್ ಚಾಲಕರ ಸಾಹಸ ಪ್ರರ್ದಶಿಸುವ ರೈಡಿಂಗ್ ಗಳು ಸ್ಥಳೀಯರಿಗೆ ರೋಮಾಂಚನವನ್ನು ನೀಡಿತು. ಸ್ಪರ್ಧೆಯಲ್ಲಿ ಮಹಿಳೆಯರು ಕುಟುಂಬ ಸಮೇತವಾಗಿ ಭಾಗಿಯಾಗಿದ್ದು ಕಂಡುಬಂತು.

Recommended Video

RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

Rallyಯಲ್ಲಿ ಸ್ಥಳೀಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧಿಗಳು ಮಾಸ್ಕ್ ಗಳನ್ನು ಧರಿಸಿ, ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಭಾಗವಹಿಸಿದ್ದ ಪ್ರತಿ ಸ್ಪರ್ಧಿಗೂ ಆಯೋಜಕರು ಹಣ್ಣಿನ ಗಿಡವನ್ನು ನೀಡಿದರು. ಇಲ್ಲಿನ ಸಹ್ಯಾದ್ರಿ ಲಯನ್ಸ್ ವತಿಯಿಂದ ಕೊರೊನಾ ಜಾಗೃತಿ ಮೂಡಿಸಲಾಯಿತು.

English summary
As the rain subsided, Koppa Sports Club of Chikkamagaluru hosted a four-wheeled Rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X