ಸಂಪುಟ ವಿಸ್ತರಣೆ ಕಗ್ಗಂಟಿನ ನಡುವೆ ಕಾರಜೋಳ ಸಚಿವ ಸ್ಥಾನ ತ್ಯಾಗದ ಮಾತು

ಚಿಕ್ಕಮಗಳೂರು, ಜನವರಿ 28: ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಚಿವ ಸ್ಥಾನ ತ್ಯಾಗದ ಮಾತುಗಳನ್ನು ಆಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, "ಪಕ್ಷ ಸೂಚಿಸಿದರೆ ಇಲ್ಲಿಂದಲೇ ಸರ್ಕಾರಿ ಕಾರು ವಾಪಸ್ ಕಳಿಸಿ ಬಸ್ ನಲ್ಲಿ ಹೋಗ್ತೇನೆ" ಎಂದರು.

I Am Ready To Leave My Position Said DCM Govinda Karajola In Chikkamagaluru

"ಜಾತಿ ಆಧಾರದ ಮೇಲೆ ಒತ್ತಡಗಳು ಹೆಚ್ಚಾಗಬಾರದು. ಪಕ್ಷಕ್ಕಾಗಿ ದುಡಿದವರನ್ನು ಆಧರಿಸಿ ವರಿಷ್ಟರು ನಿರ್ಣಯ ಮಾಡುತ್ತಾರೆ" ಎಂದು ತಿಳಿಸಿದರು. ಡಿಸಿಎಂ ಸ್ಥಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇನ್ನು ಹಲವರು ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ತೀರ್ಮಾನಿಸುವುದು ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ" ಎಂದಷ್ಟೇ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+