ವಿವಾದಿತ ದತ್ತಪೀಠದಲ್ಲೂ ಕೇಳಿಬಂತು "ಹೌದು ಹುಲಿಯಾ"

ಚಿಕ್ಕಮಗಳೂರು, ಡಿಸೆಂಬರ್ 12: ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಕೇಳಿ ಬಂದ ''ಹೌದು ಹುಲಿಯಾ'' ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಆ ನಂತರ ಎಲ್ಲೆಲ್ಲೂ ಹೌದು ಹುಲಿಯಾ ಎಂಬ ಡೈಲಾಗ್ ಕೇಳಿಬರುತ್ತಿತ್ತು. ಇದೀಗ ವಿವಾದಿತ ದತ್ತಪೀಠದಲ್ಲೂ "ಹೌದು ಹುಲಿಯಾ" ಡೈಲಾಗ್ ಕೇಳಿಬಂದಿದೆ.

ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಎರಡು ದಿನಗಳ ಹಿಂದೆ ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ. ಇಂದು ರಾಜ್ಯದ ವಿವಿಧಡೆಯಿಂದ ದತ್ತಪಾದುಕೆ ದರ್ಶನಕ್ಕಾಗಿ ವಿವಾದಿತ ದತ್ತಪೀಠಕ್ಕೆ ದತ್ತಭಕ್ತರು ಆಗಮಿಸಿದ್ದರು.

ದರ್ಶನ ಪಡೆಯುಲು ಸಾಲಿನಲ್ಲಿ ನಿಂತಿದ್ದ ದತ್ತ ಭಕ್ತರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಆ ಘೋಷಣೆಯಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ ಸುದ್ದಿಯಾಗಿದ್ದ "ಹೌದು ಹುಲಿಯಾ" ಡೈಲಾಗ್ ಕೂಡ ಕೇಳಿಬಂತು.

Houdu Huliya Dialogue Heard In Datta Peeta At Chikkamagaluru

"ದತ್ತಪೀಠ ನಮ್ಮದು, ಹೌದು ಹುಲಿಯಾ", "ದತ್ತಪೀಠ ಯಾರದ್ದು ಹಿಂದೂಗಳದ್ದು, ಹೌದು ಹುಲಿಯಾ" ಎನ್ನುವ ಡೈಲಾಗ್ ದತ್ತ ಭಕ್ತರಿಂದ ಕೇಳಿಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+