ಚಿಕ್ಕಮಗಳೂರಿನಲ್ಲಿ ನಿಲ್ಲದ ವರುಣನ ಅಟ್ಟಹಾಸ; ಜಿಲ್ಲೆಯ ಮಳೆ ವಿವರ ಇಲ್ಲಿದೆ

ಚಿಕ್ಕಮಗಳೂರು, ಸೆಪ್ಟೆಂಬರ್‌, 07: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ 7 ಮನೆಗಳಿಗೆ ಹಾನಿ ಆಗಿದೆ. ಮತ್ತೊಂದೆಡೆ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಜಲಾವೃತಗೊಂಡಿವೆ.

ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಆಗುತ್ತಿದ್ದು, ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇಂದು ಕಳಸ, ಮೂಡಿಗೆರೆ ಭಾಗದಲ್ಲಿ ಹಲವು ಜಮೀನುಗಳು ಜಲಾವೃತವಾಗಿದ್ದು, ಬೆಳೆಗಳನ್ನು ಕಳೆದುಕೊಂಡ ರೈತರು ದಿಕ್ಕು ತೋಚದಂತೆ ಕಂಗಾಲಾಗಿದ್ದಾರೆ. ಇನ್ನು ಅಜ್ಜಂಪುರ ಭಾಗದಲ್ಲಿ 25ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆ ಆಗಿವೆ. ತಾಲೂಕಿನ ಅರಬಲದಲ್ಲಿ 12 ಮನೆ, ತಿಮ್ಮಾಪುರದಲ್ಲಿ 9 ಹಾಗೂ ಜಾವೂರು, ಹೊಸಹಳ್ಳಿಯಲ್ಲಿ ತಲಾ 3 ಮನೆಗಳಿಗೆ ಹಾನಿ ಆಗಿದೆ. ಅತ್ತಿಮೊಗ್ಗೆ ಭಾಗದಲ್ಲಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆನಷ್ಟ ಉಂಟಾಗಿದೆ.

ಅಜ್ಜಂಪುರ ಪಟ್ಟಣದ ಶಿವಾಜಿ ರಸ್ತೆ, ಬನಶಂಕರಿ ರಸ್ತೆ, ಶ್ರೀರಾಮ ಹಾಗೂ ಪಟ್ಟಣದ ಸಮೀಪದಲ್ಲಿರುವ ಗೌರಪುರದಲ್ಲಿರುವ ಮನೆಗಳು ನೀರು ಪಾಲಾಗಿವೆ. ಮತ್ತೊಂದೆಡೆ ತಾಲೂಕಿನ ನಾರಾಯಣಪುರ, ಶಿವನಿ, ಅನುವನಹಳ್ಳಿ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಈರುಳ್ಳಿ, ಶೇಂಗಾ ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿದೆ. ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದ್ದು, ಆಲ್ದೂರು, ಹವ್ವಳ್ಳಿ ಬಳಿ ಇರುವ ಹುಲಿ ಹಳ್ಳದ ಸಂಪರ್ಕವು ಕಡಿತವಾಗಿದೆ. ಬಾಳೆಹೊನ್ನೂರು ಸಮೀಪದ ಹೆದ್ದಾರಿ ಪಕ್ಕದಲ್ಲಿ ಬೃಹತ್‌ ಮರವೊಂದು ನೆಲಕ್ಕುರುಳಿದ್ದು, ಅದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ತೆರವುಗೊಳಿಸಿದ್ದಾರೆ.

 ನದಿಯಾಗಿ ಮಾರ್ಪಟ್ಟ ಗದ್ದೆಗಳು

ನದಿಯಾಗಿ ಮಾರ್ಪಟ್ಟ ಗದ್ದೆಗಳು

ಅಜ್ಜಂಪುರ, ಹೊಸಕೆರೆ, ಮೇಗರಮಕ್ಕಿ, ನರಸಿಂಹರಾಜಪುರ, ಬುಕ್ಕಾಂಬುದಿ, ಕೊಟ್ಟಿಗೆಹಾರ ಕಳಸ ಭಾಗದಲ್ಲಿ ಮಳೆರಾಯ ಆರ್ಭಟಿಸಿದ್ದು, ಕಳಸ ಸಮೀಪದ ಗ್ರಾಮವೊಂದರಲ್ಲಿ ಗದ್ದೆಯೂ ನದಿಯಾಗಿ ಮಾರ್ಪಟ್ಟಿದೆ. ಶಿವನಿ ಅನುವನಹಳ್ಳಿ ನಾರಾಯಣಪುರ ಸೇತುವೆ ಮೇಲೆ ಮಳೆ ನೀರು ರಭಸವಾಗಿ ಹರಿದು ಸಂಚಾರ ಅಸ್ತವ್ಯಸ್ಥಗೊಂಡಿದೆ.

 ಮುಂದುವರೆದ ವರುಣನ ಅಟ್ಟಹಾಸ

ಮುಂದುವರೆದ ವರುಣನ ಅಟ್ಟಹಾಸ

ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ತರೀಕೆರೆ, ಕಡೂರು ಭಾಗಗಳಲ್ಲಿಯೂ ಮಳೆರಾಯ ಆರ್ಭಟಿಸಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಅಬ್ಬರಿಸುತ್ತಿರುವ ಮಳೆಗೆ ಜನರು ಬೆಚ್ಚಿ ಬಿದ್ದಿದ್ದು, ಜನರು ಮಳೆಯನ್ನು ನಿಲ್ಲಿಸುವಂತೆ ದೇವರ ಮೊರೆ ಹೋಗುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

 ಮಳೆ ಹಾನಿಗೆ ಒಳಗಾದ ಮನೆಗಳ ಸಂಖ್ಯೆ

ಮಳೆ ಹಾನಿಗೆ ಒಳಗಾದ ಮನೆಗಳ ಸಂಖ್ಯೆ

24 ಗಂಟೆಗಳಲ್ಲಿ ಸುರಿದ ಮಳೆಯಿಂದ 7 ಮನೆಗಳಿಗೆ ಹಾನಿ ಆಗಿದ್ದು, 3 ಮನೆಗಳಿಗೆ ಶೇಕಡಾ 25 ರಿಂದ 75ರಷ್ಟು ಹಾನಿ ಹಾಗಿದೆ. 4 ಮನೆಗಳಿಗೆ ಶೇಕಡಾ 15 ರಿಂದ 25 ರಷ್ಟು ಹಾನಿ ಆಗಿದೆ. ಜೂನ್ ತಿಂಗಳಿನಿಂದ ಇಲ್ಲಿಯವರೆಗೂ ಸುರಿದ ಮಳೆಯಿಂದ 950 ಮನೆಗಳಿಗೆ ಹಾನಿಗೊಳಗಾಗಿವೆ. ಒಟ್ಟು 8 ಜಾನುವಾರುಗಳು ಮೃತಪಟ್ಟಿವೆ.

 ಜಿಲ್ಲೆಯಲ್ಲಿ ದಾಖಲಾದ ಮಳೆ ಪ್ರಮಾಣ

ಜಿಲ್ಲೆಯಲ್ಲಿ ದಾಖಲಾದ ಮಳೆ ಪ್ರಮಾಣ

ಚಿಕ್ಕಮಗಳೂರು 3.3 ಮಿಲಿ ಮೀಟರ್‌, ವಸ್ತಾರೆ 22, ಜೋಳದಾಳು 19.8, ಆಲ್ದೂರು 40, ಅತ್ತಿಗುಂಡಿ 22, ಸಂಗಮೇಶ್ವರ ಪೇಟೆ 20.3, ಕೆ.ಆರ್.ಪೇಟೆ 40, ಬ್ಯಾರವಳ್ಳಿ 20.3, ಮಳಲೂರು 5, ಕಳಸಾಪುರ 9, ದಾಸದಹಳ್ಳಿಯಲ್ಲಿ 6 ಮಿಲಿ ಮೀಟರ್‌ ಮಳೆ ಆಗಿದೆ. ಇನ್ನು ಮೂಡಿಗೆರೆಯಲ್ಲಿ 17 ಮಿಲಿ ಮೀಟರ್‌, ಕೊಟ್ಟಿಗೆಹಾರ 65.8, ಗೋಣಿಬೀಡು 5, ಜಾವಳಿ 42, ಕಳಸ 44.2, ಹಿರೇಬೈಲು 50, ಹೊಸಕೆರೆ 84, ಬೆಳ್ಳೂರು 30.2, ನರಸಿಂಹರಾಜಪುರ 73.4, ಬಾಳೆಹೊನ್ನೂರು 24.6, ಮೇಗರಮಕ್ಕಿ 78, ಶೃಂಗೇರಿ 5.6, ಕಿಗ್ಗಾದಲ್ಲಿ 46 ಮಿಲಿ ಮೀಟರ್‌ ಮಳೆ ಸುರಿದಿದೆ.

ಕೊಪ್ಪ 26 ಮಿಲಿ ಮೀಟರ್‌, ಹರಿಹರಪುರ 7, ಜಯಪುರ 18.6, ಬಸರೀಕಟ್ಟೆ 39.4, ಕಮ್ಮರಡಿ 5.6, ತರೀಕೆರೆ 15.8, ಲಕ್ಕವಳ್ಳಿ 12.4, ರಂಗೇನಹಳ್ಳಿ 11.8, ಲಿಂಗದಹಳ್ಳಿ 8.2, ಉಡೇವಾ 7.4, ತಣಗಿಬೈಲು 6.4, ತ್ಯಾಗದಬಾಗಿ 17.4, ಹುಣಸೆಘಟ್ಟ 22, ಕಡೂರು 28, ಬೀರೂರು 12.8, ಸಖರಾಯಪಟ್ಟಣ 70, ಸಿಂಗಟಗೆರೆ 9.6, ಪಂಚನಹಳ್ಳಿ 35.8, ಎಮ್ಮೆದೊಡ್ಡಿ 21.2, ಯಗಟಿ 6.8, ಗಿರಿಯಾಪುರ 18, ಬಾಸೂರು 28, ಚೌಳಹಿರಿಯೂರು 22.8, ಅಜ್ಜಂಪುರ 16, ಶಿವನಿ 42.2, ಬುಕ್ಕಾಂಬುದಿಯಲ್ಲಿ 67 ಮಿಲಿ ಮೀಟರ್‌ ಮಳೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+