ಚಿಕ್ಕಮಗಳೂರಿನಲ್ಲಿ ನಕಲಿ ಚಿನ್ನದ ನಾಣ್ಯಗಳ ಮಾರಾಟ; ಮೂವರ ಬಂಧನ
ಚಿಕ್ಕಮಗಳೂರು, ಅಕ್ಟೋಬರ್, 17: ಚಿಕ್ಕಮಗಳೂರು ನಗರದಲ್ಲಿ ಖದೀಮರು ವ್ಯಕ್ತಿಯೊಬ್ಬರಿಗೆ ಅಸಲಿ ಚಿನ್ನದ ನಾಣ್ಯ ತೋರಿಸಿ, ನಂತರ ನಕಲಿ ತಾಮ್ರದ ನಾಣ್ಯಗಳನ್ನು ಕೊಟ್ಟು ಹಣ ಪಡೆದು ಪರಾರಿ ಆಗಿದ್ದರು. ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸಿದ ಮೂವರು ಆರೋಪಿಗಳನ್ನು ಇದೀಗ ಚಿಕ್ಕಮಗಳೂರಿನ ಸಿಇಎನ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ಶ್ರೀನಿವಾಸ ನಾಯ್ಕ (21), ಕೋಟಿನಾಯ್ಕ್ (28), ವೆಂಕಟೇಶ್ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 5 ಸಾವಿರ ನಗದು, ಕಾರು, ಎರಡು ಚಿನ್ನದ ನಾಣ್ಯ, 1.95 ಕೆ.ಜಿ ತಾಮ್ರದ ನಾಣ್ಯ, ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರ ನಡುವೆ ಸಂಘರ್ಷಕ್ಕೆ ಯತ್ನ: ಆರೋಪ
ನಗರದ ಕಾಫಿ ಎಸ್ಟೇಟ್‌ನಲ್ಲಿ ಕೆ.ಮಹೇಶ್ ಮತ್ತು ಹರಪನಹಳ್ಳಿ ಶ್ರೀನಿವಾಸ್ ಪರಿಚಯವಾಗಿತ್ತು. ಇತ್ತೀಚೆಗೆ ಮಹೇಶ್‌ಗೆ ಶ್ರೀನಿವಾಸ್ ಫೋನ್ ಮಾಡಿ ತನ್ನ ಬಳಿ
2 ಕೆ.ಜಿ ಚಿನ್ನದ ನಾಣ್ಯಗಳಿವೆ. ಅವುಗಳನ್ನು 5 ಲಕ್ಷಕ್ಕೆ ಕೊಡುವುದಾಗಿ ನಂಬಿಸಿದ್ದರು. ಕೆಲವು ದಿನಗಳ ನಂತರ ಮೂವರು ಕಾರಿನಲ್ಲಿ ಚಿಕ್ಕಮಗಳೂರಿಗೆ ಬಂದು ಎರಡು ಅಸಲಿ ಚಿನ್ನದ ನಾಣ್ಯಗಳನ್ನು ಮಹೇಶ್‌ಗೆ ಕೊಟ್ಟು ಪರಿಶೀಲಿಸುವಂತೆ ತಿಳಿಸಿದ್ದಾರೆ.
ನಕಲಿಗಳ ಅಸಲಿ ಸತ್ಯ ಬಯಲು
ನಾಣ್ಯಗಳನ್ನು ಪರಿಶೀಲಿಸಿದಾಗ ಅವು ಅಸಲಿ ನಾಣ್ಯ ಎಂದು ತಿಳಿದು ಬಂದಿದ್ದು. ಮಹೇಶ್‌ಗೆ 20 ನಾಣ್ಯಗಳನ್ನು ಕೊಟ್ಟು ಗೂಗಲ್ ಪೇ ಮೂಲಕ 5 ಸಾವಿರ ಪಡೆದು ಮೂವರು ಪರಾರಿ ಆಗಿದ್ದರು. ಮಹೇಶ್ 20 ನಾಣ್ಯಗಳನ್ನು ಅಕ್ಕಸಾಲಿಗರಿಗೆ ಕೊಟ್ಟು ಪರೀಕ್ಷೆ ಮಾಡಿಸಿದಾಗ ಅವು ತಾಮ್ರದ ನಾಣ್ಯಗಳು ಎಂದು ಗೊತ್ತಾಗಿದೆ. ಆಗ ಎಚ್ಚೆತ್ತುಕೊಂಡ ಮಹೇಶ್ ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಇನ್‍ಸ್ಪೆಕ್ಟರ್ ಮುತ್ತುರಾಜ್, ಪಿಎಸ್‍ಐ ನಾಸೀರ್ ಮತ್ತು ರಘುನಾಥ್ ತಂಡ ಕಾರ್ಯಾಚರಣೆ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ನೂರಾರು ಎಕರೆ ಗದ್ದೆ ಜಲಾವೃತ
ಹೊರರಾಜ್ಯದ ಮುಗ್ಧ ಜನರಿಗೂ ವಂಚನೆ
ವಿಚಾರಣೆ ನಡೆಸಿದಾಗ ಮೂವರು ಆರೋಪಿಗಳು ಈ ಹಿಂದೆ ಇದೇ ರೀತಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ 50 ಸಾವಿರ ರೂಪಾಯಿ ಬೆಲೆಗೆ, ಮಹಾರಾಷ್ಟ್ರದ ಪಾಂಡರಪುರದಲ್ಲಿ 2 ಲಕ್ಷ ಬೆಲೆಗೆ ಮತ್ತು ಹುಬ್ಬಳ್ಳಿಯಲ್ಲಿ 1.70 ಲಕ್ಷ ಬೆಲೆಗೆ ನಕಲಿ ನಾಣ್ಯಗಳನ್ನು ಸಾರ್ವಜನಿಕರಿಗೆ ನೀಡಿ ವಂಚಿಸಿದ್ದಾರೆ. ಅಲ್ಲದೇ ಇವುಗಳನ್ನು ಚಿನ್ನದ ನಾಣ್ಯ ಎಂದು ನಂಬಿಸಿ ಮುಗ್ದ ಜನರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ.