ಅಜ್ಜಂಪುರದ ಪಾನಮತ್ತ ವೈದ್ಯ ಆಸ್ಪತ್ರೆಯಲ್ಲಿಯೇ ಬೆತ್ತಲು: ರೋಗಿ ಸಾವು
ಚಿಕ್ಕಮಗಳೂರು, ಮಾರ್ಚ್ 01: ಸರ್ಕಾರಿ ವೈದ್ಯ ಕಂಠಪೂರ್ತಿ ಕುಡಿದು ಆಸ್ಪತ್ರೆಯಲ್ಲಿಯೇ ಬೆತ್ತಲಾಗಿದ್ದನು. ಡಾ.ಚನ್ನಕೇಶವ ಎಂಬ ವೈದ್ಯನೇ ಆಸ್ಪತ್ರೆಯಲ್ಲಿ ರಾತ್ರಿ ಬೆತ್ತಲಾಗಿ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ವೈದ್ಯ ಡಾ.ಚನ್ನಕೇಶವ ಪಾನಮತ್ತನಾಗಿ ಮಲಗಿದ್ದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಮಹಿಳಾ ರೋಗಿ ಸಾವನ್ನಪ್ಪಿದ್ದಾಳೆ.
ಅಜ್ಜಂಪುರ ತಾಲೂಕಿನ ಪುಟ್ಟಮ್ಮ ಎಂಬ ಮಹಿಳೆಗೆ ಚಿಕಿತ್ಸೆ ದೊರೆಯದೇ ಸಾವನ್ನಪ್ಪಿದ್ದಾಳೆ.

ಕೊಠಡಿಯಲ್ಲಿ ನಗ್ನವಾಗಿ ಬಿದ್ದಿದ್ದರಿಂದ, ಹೆಬ್ಬೂರಿನ ಪುಟ್ಟಮ್ಮ ಎಂಬವವರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ವೈದ್ಯನ ವಿರುದ್ಧ ಸಾರ್ವಜನಿಕರು ಹಾಗೂ ಮೃತ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಲಾಗಿದೆ.

ಕುಡುಕ ವೈದ್ಯ ಚನ್ನಕೇಶವ ಅವರು ಅಸಭ್ಯ ವರ್ತನೆ ತೋರಿದ್ದಾರೆ ಮತ್ತು ಚಿಕಿತ್ಸೆ ನೀಡದೆ ಕರ್ತವ್ಯ ಪಾಲಿಸಿಲ್ಲ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಜ್ಜಂಪುರ ಪೊಲೀಸರು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ.












Click it and Unblock the Notifications