ಮಲೆನಾಡಲ್ಲೀಗ ಏಡಿ ಶಿಕಾರಿ ಸಮಯ; ಏಡಿಗಳಿಗಂತೂ ಫುಲ್ ಡಿಮ್ಯಾಂಡ್

ಚಿಕ್ಕಮಗಳೂರು, ಸೆಪ್ಟೆಂಬರ್ 3: ಕಾಫಿನಾಡಿನಲ್ಲಿ ಈಗ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗುತ್ತಿವೆ.

Recommended Video

      Narendra Modiಯವರ Twitter ಹಾಗು Website hacked | Oneindia Kannada

      ಜೊತೆಗೆ ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿದ್ದಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದರೆ ಬಿಡುತ್ತಾರಾ? ಹೀಗಾಗಿಯೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ, ಅತ್ತಿಗೆರೆ, ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಜನರು ಏಡಿ ಶಿಕಾರಿಗೆ ಇಳಿಯುತ್ತಿದ್ದಾರೆ. ಎಲ್ಲೆಡೆ ಏಡಿಗಳ ಶಿಕಾರಿ ಚಿತ್ರಣ ಕಂಡುಬರುತ್ತಿದೆ.

       ಏಡಿ ಹಿಡಿಯಲು ಪೈಪೋಟಿ

      ಏಡಿ ಹಿಡಿಯಲು ಪೈಪೋಟಿ

      ಇತ್ತೀಚಿನ ವರ್ಷಗಳಲ್ಲಿ ಏಡಿಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಆದರೆ ಈ ವರ್ಷ ಭಾರೀ ಪ್ರಮಾಣದಲ್ಲಿ ಗದ್ದೆಗಳಲ್ಲಿ ಏಡಿಗಳು ಕಂಡು ಬರುತ್ತಿರುವುದರಿಂದ ಜನರು ಅವುಗಳನ್ನು ಹಿಡಿಯಲು ಭಾರೀ ಪೈಪೋಟಿ ನಡೆಯುತ್ತಿದೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು, ಮಹಿಳೆಯರು, ವೃದ್ಧೆಯರು, ಪುರುಷರು ಭರ್ಜರಿ ಏಡಿ ಶಿಕಾರಿ ಮಾಡುತ್ತಿದ್ದಾರೆ.

       ಕೆ.ಜಿ.ಗೆ 300-400 ರೂ

      ಕೆ.ಜಿ.ಗೆ 300-400 ರೂ

      ಹೀಗೆ ಏಡಿಗಳನ್ನು ಹಿಡಿದು ಮಾರಾಟ ಕೂಡ ಮಾಡಲಾಗುತ್ತಿದ್ದು, ಜನರು ಏಡಿಗಳಿಗೆ ಮುಗಿಬೀಳುತ್ತಿರುವುದರಿಂದ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ಕೆಜಿ ಏಡಿಗೆ 300-400 ರೂವರೆಗೆ ಹಣ ಕೊಟ್ಟು ಏಡಿಗಳನ್ನ ಜನರು ಖರೀದಿಸುತ್ತಿದ್ದಾರೆ

       ಮಲೆನಾಡಿನಲ್ಲಿ ಏಡಿ ಸಾರು ಫೇಮಸ್

      ಮಲೆನಾಡಿನಲ್ಲಿ ಏಡಿ ಸಾರು ಫೇಮಸ್

      ಸರ್ವರೋಗಕ್ಕೆ ಸಾರಾಯಿ ಮದ್ದು ಅನ್ನೋ ಗಾದೆ ಮಾತಿದೆ, ಹಾಗೆಯೇ ಮಲೆನಾಡಿನಲ್ಲಿ ಏಡಿ ಸಾರು ತಿಂದ್ರೆ ಯಾವುದೇ ಕಾಯಿಲೆ ಬರಲ್ಲ ಅನ್ನೋ ಮಾತು ಕೂಡ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಏಡಿ ಸಾರು ಸವಿಯೋದ್ರಲ್ಲಿ ಹಿಂದಿನಿಂದಲೂ ಮಲೆನಾಡಿಗರು ಒಂದು ಹೆಜ್ಜೆ ಮುಂದೆಯೇ. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಏಡಿ ಸಾಂಬರಿಗೆ ಜನ ಹಾತೊರೆಯುತ್ತಿದ್ದಾರೆ. ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ ಅನ್ನೋ ನಂಬಿಕೆಯಿಂದ ಏಡಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

       ಪ್ರತಿದಿನ ಸಾವಿರಕ್ಕೂ ಹೆಚ್ಚು ಹಣ ಗಳಿಕೆ

      ಪ್ರತಿದಿನ ಸಾವಿರಕ್ಕೂ ಹೆಚ್ಚು ಹಣ ಗಳಿಕೆ

      ಏಡಿಗಳನ್ನು ಹಿಡಿಯಲೆಂದೇ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಗದ್ದೆಗಳಲ್ಲಿ ಶಿಕಾರಿ ಮಾಡುತ್ತಿದ್ದಾರೆ. ಕೆಲವರು 2-3 ಕೆಜಿಯಷ್ಟು ಏಡಿ ಹಿಡಿದು ಸಾವಿರಕ್ಕೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಈ ವರ್ಷವಂತೂ ಭಾರೀ ಪ್ರಮಾಣದಲ್ಲಿ ಏಡಿಗಳು ಪ್ರತ್ಯಕ್ಷವಾಗಿರುವುದರಿಂದ ಜನರಿಗೆ ಏಡಿ ಹಿಡಿಯುವುದೇ ಒಂದು ಸಂಭ್ರಮ. 150-200 ರೂಪಾಯಿ ಕೊಟ್ರೆ ಮೀನು, ಚಿಕನ್ ಸಿಗುತ್ತೆ. ಆದ್ರೆ ಕೆಜಿ ಏಡಿಗೆ 300ರೂ ಕೊಟ್ರೂ ಸಿಗ್ತಿಲ್ಲ. ಒಟ್ಟಿನಲ್ಲಿ ಏಡಿ, ಕೊರೊನಾ ತಡೆಗಟ್ಟುತ್ತೋ, ಬಿಡುತ್ತೋ ಗೊತ್ತಿಲ್ಲ, ಆದರೆ ಈ ಬಾರಿ ಮಾತ್ರ ಏಡಿಗಳನ್ನು ಜನ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+