ದತ್ತಪೀಠದ ಅರ್ಚಕರು, ಮುಜಾವರ್‌ ಸಹಿತ ಐವರಿಗೆ ಗನ್‌ಮ್ಯಾನ್‌ ನೇಮಕ!

ಚಿಕ್ಕಮಗಳೂರು, ಡಿಸೆಂಬರ್ 19; ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ 2023ಕ್ಕೆ ಚಾಲನೆ ಸಿಕ್ಕಿದೆ. ಡಿಸೆಂಬರ್ 26ರ ತನಕ ದತ್ತ ಜಯಂತಿ ನಡೆಯಲಿದೆ. ಚಿಕ್ಕಮಗಳೂರಿನಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅರ್ಚಕರು, ಮುಜಾವರ್‌ ಸಹಿತ ಐವರಿಗೆ ಗನ್‌ಮ್ಯಾನ್ ನೇಮಕ ಮಾಡಲಾಗಿದೆ.

ದತ್ತ ಜಯಂತಿ ಡಿಸೆಂಬರ್ 26ರ ತನಕ ನಡೆಯಲಿದೆ. ಈ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಕಟ್ಟೆಚ್ಚರವಹಿಸಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಅರ್ಚಕರು, ಮುಜಾವರ್ ಸೇರಿದಂತೆ ಐವರಿಗೆ ಪೊಲೀಸ್ ಇಲಾಖೆ ಗನ್‌ಮ್ಯಾನ್ ನೇಮಕ ಮಾಡಿದೆ.

 Datta Jayanti 2023 Gunman Appointed For Priests

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿರುವ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಗನ್‌ಮ್ಯಾನ್‌ಗಳನ್ನು ನೇಮಿಸಿದ್ದು, ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಎಸ್. ಎಂ. ಬಾಷಾ, ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಂ ಭಟ್ ಹಾಗೂ ಮುಜಾವರ್‌ಗಳಾದ ಸೈಯದ್ ಅಖಿಲ್ ಪಾಷಾ ಹಾಗೂ ಇಸ್ಮಾಯಿಲ್ ಅವರಿಗೆ ಗನ್‌ಮ್ಯಾನ್ ನೇಮಿಸಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆದೇಶಿಸಿದ್ದಾರೆ.

ಈ ಆದೇಶ ಮುಂದಿನ 15 ದಿನಗಳ ಕಾಲ ಜಾರಿಯಲ್ಲಿರುತ್ತದೆ. ದಿನದ 24 ಗಂಟೆಗಳ ಕಾಲವೂ ಐವರಿಗೆ ಗನ್‌ಮ್ಯಾನ್ ಭದ್ರತೆಯನ್ನು ನೀಡಲಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಸಹ ಮಂಗಳವಾರ ಚಿಕ್ಕಮಗಳೂರಿಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ದತ್ತಪೀಠಕ್ಕೆ ಗೃಹ ಸಚಿವರ ಭೇಟಿ; ದತ್ತ ಜಯಂತಿಗೆ ಚಾಲನೆ ಸಿಗುತ್ತಿದ್ದಂತೆಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಂಗಳವಾರ ದತ್ತಪೀಠಕ್ಕೆ ಭೇಟಿ ನೀಡಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ದತ್ತಜಯಂತಿ ಸಂದರ್ಭದಲ್ಲಿ ಗೃಹ ಸಚಿವರು ದತ್ತಪೀಠಕ್ಕೆ ಭೇಟಿ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, "ದತ್ತಜಯಂತಿಗೆ ನಾನು ಯಾವತ್ತೂ ಬಂದಿರಲಿಲ್ಲ ಅದಕ್ಕೆ ಬಂದೆ. ನಾನು ದತ್ತಪೀಠ ನೋಡಿರಲಿಲ್ಲ, ನೋಡುವುದಕ್ಕೆ ಬಂದೆ. ಇದೊಂದು ಆಕಸ್ಮಿಕ ಭೇಟಿ ಅಷ್ಟೆ, ಇದಕ್ಕೆ ವಿಶೇಷ ಅರ್ಥ ಬೇಡ" ಎಂದರು.

ಮತ್ತೊಂದು ಕಡೆ ವಿಎಚ್‌ಪಿ, ಬಜರಂಗದಳದ ದತ್ತಜಯಂತಿಗೆ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್. ಡಿ. ತಮ್ಮಯ್ಯ ಸಾಥ್ ನೀಡಿದ್ದಾರೆ. ಅವರು ದತ್ತಮಾಲೆ ಧರಿಸಿದ್ದು, ಗೃಹ ಸಚಿವರ ಜೊತೆ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ಈ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಲು ಮುಂದಾದರೂ ಅವರು ಪ್ರತಿಕ್ರಿಯೆ ನೀಡಿಲ್ಲ.

ದತ್ತಮಾಲೆ ಹಾಕಿ ವೃತ ಆಚರಿಸುತ್ತಿರುವವರು ಕಾಲಿಗೆ ಚಪ್ಪಲಿ ಹಾಕುವಂತಿಲ್ಲ, ಬರಿಗಾಲಲ್ಲಿ ಓಡಾಡಬೇಕು. ದತ್ತಮಾಲೆ ಹಾಕಿ ಕೇಸರಿ ಶಲ್ಯ ಹಾಕದೆ ಬರಿಗಾಲಲ್ಲಿ ಶಾಸಕ ಹೆಚ್. ಡಿ. ತಮ್ಮಯ್ಯ ಸಂಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ತಮ್ಮಯ್ಯ 18 ವರ್ಷವೂ ದತ್ತಮಾಲೆ ಧರಿಸಿ ವೃತ ಆಚರಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮಯ್ಯ ಕಾಂಗ್ರೆಸ್ ಸೇರಿ, ಸಿ. ಟಿ. ರವಿ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+