• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್, ಹಿಂದೂಗಳೇ ಟಾರ್ಗೆಟ್ ಆಗಿದ್ದಾರೆ; ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 15: "ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಬಹುಶಃ ಜಮೀರ್ ಅಹಮದ್ದೇ ಡೈರಕ್ಟರ್, ಪ್ರೊಡ್ಯೂಸರ್ ಅನಿಸುತ್ತೆ. ಎಲ್ಲಾ ಅವರೇ ಆಗಿದ್ದು, ಆಕ್ಟರ್ ಯಾರೆಂದೂ ಅವರಿಗೆ ಗೊತ್ತಿದೆ. ತೊಟ್ಟಿಲು ತೂಗಿ ಮಗು ಚಿವುಟೋ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದೂ ಅದನ್ನೇ" ಎಂದು ಸಚಿವ ಸಿ.ಟಿ.ರವಿ ಇಂದು ಚಿಕ್ಕಮಗಳೂರಿನಲ್ಲಿ ಆರೋಪಿಸಿದರು.

   CT Ravi ಪ್ರಕಾರ ನಡೆದ ಗೋಲಿಬಾರ್‌ಗೆ Zameer Ahmed ಡೈರೆಕ್ಟರ್ ಹಾಗು ಪ್ರೊಡ್ಯೂಸರ್ | Oneindia Kannada

   "ಜಮೀರ್ ಗಲಾಟೆ ಮಾಡಿದವರನ್ನು ಅಮಾಯಕರು ಎಂದಿದ್ದಾರೆ. ನಷ್ಟವನ್ನು ಜಮೀರ್ ಅವರಿಂದಲೇ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳೋಣ. ಜಮೀರ್ ಸಹಾಯ ಮಾಡೋದು ಮಾನವೀಯ ಸಂಬಂಧ ಇರಬಹುದು. ಯಾರಿಗೆ, ಯಾವ ಸಂದರ್ಭದಲ್ಲಿ ಮಾಡ್ತಾರೆ ಎಂಬುದು ಮುಖ್ಯ. ಯಾರು ಏನೇ ಮಾಡಿದರೂ ಜೊತೆಗಿರ್ತೀನಿ ಎಂಬ ಮೆಸೇಜ್ ಕೊಡುತ್ತೆ, ಇದು ಮಾನವೀಯ ಮೆಸೇಜ್ ಕೊಡಲ್ಲ" ಎಂದು ಸಿಡಿಮಿಡಿಗೊಂಡರು.

   ಕೆ. ಜಿ. ಹಳ್ಳಿ ಗಲಭೆ; ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ಕೆ. ಜಿ. ಹಳ್ಳಿ ಗಲಭೆ; ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ

   "ಅವರು ಅಮಾಯಕರು ಅಂತಿದ್ದಾರೆ. ಅಮಾಯಕರು ಮನೆಯಲ್ಲಿ ಮಲಗಿದ್ದವರು. ಬಲಿಯಾದವರು ಅಮಾಯಕರಾದರೆ, ವಾಹನ ಸುಟ್ಟವರು ಯಾರು? ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಆಗಿಲ್ಲ. ಪೊಲೀಸ್, ಹಿಂದೂಗಳಷ್ಟೆ ಟಾರ್ಗೆಟ್" ಎಂದರು.

   "ಬುದ್ಧಿ ಜೀವಿಗಳು ಈಗ ಲದ್ದಿ ತಿನ್ನುತ್ತಿದ್ದಾರೆ. ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಯಾಕೆ ಸುಮ್ಮನಿದ್ದಾರೆ? ಎಲ್ಲಿದೆ ಅಹಿಂದಾ ಪ್ರೇಮ? ಒಂದೇ ಹೇಳಿಕೆಗೆ ರೋಷನ್ ಬೇಗ್ ಅಮಾನತು ಮಾಡಿದರು. 30 ವರ್ಷ ಪಕ್ಷದಲ್ಲಿದ್ದವರು, ಆರು ಬಾರಿ ಶಾಸಕರಾಗಿದ್ದವರು. ಆದರೂ ಒಂದೇ ಹೇಳಿಕೆಗೆ ಅಮಾನತು ಮಾಡಿದರು. ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು, ಆಮೇಲೆ ಏನಾಯ್ತು? ಇವೆಲ್ಲ ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ" ಎಂದು ಹೇಳಿದರು.

   English summary
   Zameer ahmed is behind the scene of bengaluru violence alleges CT Ravi in chikkamagaluru today,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X