ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Chikkamagaluru Utsav 2023 : ಚಿಕ್ಕಮಗಳೂರು ಉತ್ಸವಕ್ಕೆ ಕ್ಷಣಗಣೆ; ಗಮನ ಸೆಳೆಯಲಿರುವ ವಿವಿಧ ಜಿಲ್ಲೆಗಳ ಕಲಾ ತಂಡಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ, 18: ಜಿಲ್ಲಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ‌.ಎನ್.ರಮೇಶ್ ಮಾಹಿತಿ ನೀಡಿದ್ದಾರೆ. ಹಾಗಯೇ ವಿವಿಧ ರೀತಿಯ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಉತ್ಸವದ ಮೆರಗನ್ನು ಹೆಚ್ಚಿಸಲಿದ್ದಾರೆ.

ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತಾನಾಡಿದ ಅವರು ಬುಧವಾರ ಸಂಜೆ 5:30ಕ್ಕೆ ಜಿಲ್ಲಾ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಸಲಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಉಪಸ್ಥಿತರಿರಲಿದ್ದಾರೆ. ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉತ್ಸವದಲ್ಲಿ ಜಾನಪದ ರಂಗು ನೀಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾ ತಂಡಗಳು ಮಂಗಳವಾರ ಜಿಲ್ಲೆಗೆ ಆಗಮಿಸಿವೆ.

Chikkamagaluru utsav 2023: ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆ ಆಯೋಜನೆ, ಈ ಸ್ಪರ್ಧೆಯ ಉದ್ದೇಶವೇನು?Chikkamagaluru utsav 2023: ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆ ಆಯೋಜನೆ, ಈ ಸ್ಪರ್ಧೆಯ ಉದ್ದೇಶವೇನು?

ಗಮನ ಸೆಳೆಯಲಿರುವ ಕಲಾ ತಂಡಗಳು
ಕಹಳೆ, ನಗಾರಿ, ನಂದಿಧ್ವಜ, ಪಟಕುಣಿತ, ಜೋಮನ ಕುಣಿತ, ಚಿಟ್ಟೆಮೇಳ, ಹುಲಿ ವೇಷ, ಹಾಲಕ್ಕಿ ಮತ್ತು ಗೊರವರ ಕುಣಿತ, ಯಕ್ಷಗಾನ, ಸೋಲಿಗರ ನೃತ್ಯ, ಕಂಸಾಳೆ, ಜೋಗತಿನೃತ್ಯ, ರಂಗಕುಣಿತ ಡಮಾಮಿನೃತ್ಯ, ವೀರಗಾಸೆ, ಹಳ್ಳಿವಾದ್ಯ, ಈ ಕಲಾತಂಡಗಳು ಬುಧವಾರ ನಡೆಯಲಿರುವ ಮೆರವಣಿಗೆ ವೈಭವವನ್ನು ಹೆಚ್ಚಿಸಲಿವೆ ಎಂದರು.

Countdown to Chikkamagaluru Utsav; Here see details about art troupes

ಭವ್ಯ ಮೆರವಣಿಗೆಯ ಆಯೋಜನೆ
ಬುಧವರ ಮಧ್ಯಾಹ್ನ 3 ಗಂಟೆಗೆ ನಗರದ ಡಿಎಜಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಿಂದ ಭವ್ಯ ಮೆರವಣಿಗೆ ನಡೆಯಲಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಈ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಬಸವನಹಳ್ಳಿ ಮುಖ್ಯ ರಸ್ತೆಯಿಂದ ಸಾಗುವ ಮೆರವಣಿಗೆ ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಜಿಲ್ಲಾ ಆಟದ ಮೈದಾನವನ್ನು ತಲುಪಲಿದೆ. ಹಾಗೆಯೇ ಚಂದ್ರದ್ರೋಣ ವೇದಿಕೆಯಲ್ಲಿ ಜಾನಪದ ಜಾತ್ರೆ ನಡೆಯಲಿದೆ.

Countdown to Chikkamagaluru Utsav; Here see details about art troupes

ವಸ್ತು ಪ್ರದರ್ಶನ ಉದ್ಘಾಟನೆ
ಬುಧವಾರ (ಜನವರಿ 18) ಬೆಳಗ್ಗೆ 10:30ಕ್ಕೆ ವಸ್ತುಪ್ರದರ್ಶನ ಜ್ಞಾನವೈಭವವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕೃಷಿ ಸಚಿವ ಬಿ.ಸಿ. ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಇಂಧನ ಸಚಿವ ವಿ. ಸುನಿಲ್‍ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಇನ್ನು ಶಾಸಕ ಸಿ.ಟಿ. ರವಿ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

English summary
Chikkamagaluru Utsav start from january 18th, Here see information about all art troupes, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X