ಅಪ್ಪು ಅಭಿನಯದ “ಗಂಧದಗುಡಿ”ಗಾಗಿ ಕಾಫಿನಾಡ ಚಂದು ಸ್ಪೆಷಲ್ ಹೇರ್ ಕಟಿಂಗ್
ಚಿಕ್ಕಮಗಳೂರು, ಅಕ್ಟೋಬರ್, 27: ತನ್ನ ವಿಭಿನ್ನ ಶೈಲಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಗೀತೆಯನ್ನು ಹಾಡುವ ಮೂಲಕ ರಾಜ್ಯದಲ್ಲಿ ಪ್ರಖ್ಯಾತಿ ಕಾಫಿನಾಡು ಚಂದು ಆಗಿದ್ದಾರೆ. ಹಾಗೂ ಚಂದು ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿದ್ದಾರೆ. ಅಪ್ಪು ಅಭಿನಯದ ಬಹುನಿರೀಕ್ಷಿತ "ಗಂಧದ ಗುಡಿ" ಸಿನಿಮಾ ಬಿಡುಗಡೆಗೆ ಇನ್ನೂ ಒಂದೇ ದಿನ ಬಾಕಿ ಇದೆ. ಈ ನಡುವೆ ಕಾಫಿನಾಡು ಚಂದು ತಮ್ಮ ತಲೆಯ ಹಿಂಭಾಗದ ಕೂದಲಿನಲ್ಲಿ "ಗಂಧದಗುಡಿ" ಎಂದು ಕೆತ್ತಿಸಿಕೊಂಡು ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.
ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣಗೊಳಿಸಿದ ಗಾಲಿ ಜನಾರ್ದನ ರೆಡ್ಡಿ
ಕಾಫಿನಾಡ ಚಂದು ಹೊಸ ಪ್ರಯತ್ನ
ಕಾಫಿನಾಡ ಚಂದು ಎಂದೇ ಹೆಸರಾಗಿರುವ ಚಂದು ಮತ್ತೊಂದು ಶೈಲಿಯಲ್ಲಿ ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ "ಗಂಧದಗುಡಿ" ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ತನ್ನ ತಲೆಯ ಹಿಂಭಾಗದ ಕೂದಲನ್ನು ಗಂಧದಗುಡಿ ಅಕ್ಷರ ಶೈಲಿಯಲ್ಲಿ ತೆಗೆಸಿಕೊಂಡು ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.
ತಲೆಯಲ್ಲಿ ಹಿಂದೆ "ಗಂಧದಗುಡಿ" ಎಂದು ಕೆತ್ತಿಸಿಕೊಂಡಿರುವ ಚಂದು ಚಿಕ್ಕಮಗಳೂರು ನಗರದಲ್ಲಿ ಓಡಾಡುತ್ತಾ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ. ರಸ್ತೆಯಲ್ಲಿ ಹೋಗುವವರಿಗೆಲ್ಲ ಅಪ್ಪು ಚಿತ್ರವನ್ನು ನೋಡುವಂತೆ ಪ್ರೇರೆಪಿಸುತ್ತಿದ್ದಾರೆ. ಈಗಾಗಲೇ ಪುನೀತಣ್ಣ ಸಾಕಷ್ಟು ಬೆಳೆದಿದ್ದಾರೆ. ಅವರು ಮೇಲಿನಿಂದ ನೋಡುತ್ತಿರುತ್ತಾರೆ. ನಾವು ಸಿನಿಮಾ ನೋಡಿದರೆ ಅವರಿಗೆ ಖುಷಿ ಆಗುತ್ತದೆ. ಹಾಗಾಗಿ ಎಲ್ಲರೂ ತಪ್ಪದೇ ಸಿನಿಮಾ ನೋಡಿ ಎಂದು ಮನವಿ ಮಾಡುತ್ತಿದ್ದಾರೆ. ಓಂ, ಜನುಮದ ಜೋಡಿ ಚಿತ್ರಗಳು ಯಶಸ್ಸು ಕಂಡಿವೆ. ಈ ಚಿತ್ರ ಕೂಡ ಪ್ರಸಿದ್ಧಿ ಪಡೆಯಬೇಕು. ಹಾಗಾಗಿ ಎಲ್ಲರೂ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯಾದ್ಯಂದ ಪುನೀತ್ ರಾಜ್‌ಕುಮಾರ್ ಅಭಿನಯದ "ಗಂಧದಗುಡಿ" ಸಿನಿಮಾ ತೆರೆಗೆ ಅಪ್ಪಳಿಸಲು ಕ್ಷಣಗಣನೆ ಮಾತ್ರ ಬಾಕಿ ಇದೆ. ಅಭಿಮಾನಿಗಳು ಅಪ್ಪು ಅಭಿನಯದ ಸಿನಿಮಾ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹಾಗೆಯೇ ಕಾಫಿನಾಡು ಚಂದು ಕೂಡ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿದ್ದು, ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಪ್ರಚಾರಕ್ಕೆ ಮುಂದಾಗಿದ್ದಾರೆ. ತಲೆಯ ಕೂದಲಿನಲ್ಲಿ ಗಂಧದಗುಡಿ ಎಂದು ಕೆತ್ತಿಸಿಕೊಂಡು ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.