ಸಿದ್ಧಾರ್ಥ್ ಸಾವಿಗೆ ಮೂಡಿಗೆರೆಯಾದ್ಯಂತ ಮೌನ; ಸ್ತಬ್ಧಗೊಂಡ ಕಾಫಿ ವಹಿವಾಟು
Recommended Video
ಚಿಕ್ಕಮಗಳೂರು, ಜುಲೈ 31: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮೃತದೇಹ ನೇತ್ರಾವತಿ ಹಿನ್ನೀರಿನಲ್ಲಿ ಪತ್ತೆಯಾದ ಸುದ್ದಿ ಹರಡುತ್ತಿದ್ದಂತೆ ಮೂಡಿಗೆರೆಯಾದ್ಯಂತ ನೀರವ ಮೌನ ಆವರಿಸಿದೆ. ಮೊನ್ನೆ ರಾತ್ರಿಯಿಂದ ಸಿದ್ಧಾರ್ಥ್ ಸುರಕ್ಷಿತವಾಗಿ ಬರಲಿ ಎಂದು ಕಾಯುತ್ತಿದ್ದ ಜನರ ನಿರೀಕ್ಷೆಯೂ ಹುಸಿಯಾಗಿದೆ.
ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ ಚಿಕ್ಕಮಗಳೂರಿನ ಚೇತನಹಳ್ಳಿಯ ಸಿದ್ಧಾರ್ಥ್ ಅವರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ತುಂಬಿಕೊಂಡಿದೆ.
ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು, ಸಿದ್ಧಾರ್ಥ್ ಅವರ ಬಳಿ ಕೆಲಸ ಮಾಡುತ್ತಿದ್ದ ನೌಕರರು ದುಃಖಿತರಾಗಿದ್ದಾರೆ. ಸಿದ್ಧಾರ್ಥ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿ ಕಣ್ಣೀರಾಗುತ್ತಿದ್ದಾರೆ.

ಸಿದ್ಧಾರ್ಥ್ ಅವರ ನಿಧನದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಫಿ ಮಾರುಕಟ್ಟೆಯ ಎಲ್ಲಾ ವ್ಯವಹಾರ ವಹಿವಾಟುಗಳು ಬಂದ್ ಆಗಿವೆ. ಕೆಫೆ ಕಾಫಿ ಡೇಗಳೂ ಕಾರ್ಯ ನಿಲ್ಲಿಸಿವೆ. ಮೂರು ಜಿಲ್ಲೆಯ ಕಾಫಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ಕಾಫಿ ಬೆಳೆಗಾರರ ಸಂಘವು ಚಿಕ್ಕಮಗಳೂರು, ಹಾಸನ, ಮಡೀಕೆರಿಯ ಕಾರ್ಮಿಕರಿಗೆ ರಜೆ ಘೋಷಣೆ ಮಾಡಿದೆ.
ಚಿಕ್ಕಮಗಳೂರಿನಲ್ಲಿ ಕ್ಲಬ್ ನಲ್ಲಿ ಕಾಫಿ ಬೆಳೆಗಾರರ ಒಕ್ಕೂಟದಿಂದ ತುರ್ತು ಸಭೆ ಕರೆಯಲಾಗಿದೆ.












Click it and Unblock the Notifications