ಕಾಫಿನಾಡಿನಲ್ಲಿ ಮತ್ತೆ ಕೊರೊನಾ ವೈರಸ್; ಶಿವಮೊಗ್ಗದಲ್ಲೂ ತಗ್ಗಿಲ್ಲ ಸೋಂಕು
ಚಿಕ್ಕಮಗಳೂರು, ಜೂನ್ 11: ಕೊರೊನಾ ಮುಕ್ತವಾಗಿದ್ದ ಕಾಫಿನಾಡಿಗೆ ಮತ್ತೆ ಕೊರೊನಾ ವೈರಸ್ ವಕ್ಕರಿಸಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ.
15 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಆತ ವಾಸವಾಗಿದ್ದ ಕಡೂರಿನ ಕೆ ದಾಸರಹಳ್ಳಿ ಗ್ರಾಮವನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ ಐವತ್ತೈದು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಇಂದು 10 ಕೊರೊನಾ ವೈರಸ್ ಪ್ರಕರಣ: ಜಿಲ್ಲೆಯಲ್ಲಿ ಇಂದು ಹತ್ತು ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗಿದ್ದು, ಅದರಲ್ಲಿ ಮಹಾರಾಷ್ಟ್ರದಿಂದ ಬಂದ ಎಂಟು ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇನ್ನೋರ್ವ ಮಹಿಳೆಯ ಕೊರೊನಾ ವೈರಸ್ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನೋರ್ವ ವ್ಯಕ್ತಿಗೆ ಸೋಂಕಿನ ಜೊತೆಗೆ ತೀವ್ರ ಉಸಿರಾಟದ ತೊಂದರೆಯಾಗಿದೆ.

ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 83 ಪ್ರಕರಣಗಳು ಪತ್ತೆಯಾಗಿದೆ. 83 ಪ್ರಕರಣಗಳಲ್ಲಿ 31 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ 52 ಕೊರೊನಾ ಆಕ್ಟೀವ್ ಕೇಸ್ ಇವೆ.












Click it and Unblock the Notifications