ಮನಕಲಕುವ ಘಟನೆ: ಅನಾರೋಗ್ಯದ ವೃದ್ಧೆಯನ್ನ 3 ಕಿ.ಮೀ. ಹೊತ್ತುಕೊಂಡು ಬಂದ ಕುಟುಂಬಸ್ಥರು!
ಚಿಕ್ಕಮಗಳೂರು ಸೆಪ್ಟೆಂಬರ್ 26: ಚಿಕ್ಕಮಗಳೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಅನಾರೋಗ್ಯದ ವೃದ್ಧೆಯನ್ನು ರಸ್ತೆ ಇಲ್ಲದ ಕಾರಣ ತೂಗುಸೇತುವೆ ಮೇಲೆ 3 ಕಿ.ಮೀ. ಹೊತ್ತುಕೊಂಡು ಹೋಗುವ ದೃಶ್ಯ ಕಂಡುಬಂದಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಜನ ರಸ್ತೆಯಿಲ್ಲದೆ ಪರದಾಡುತ್ತಿರುವುದು ರಾಜಕಾರಣಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ. ಹುಷಾರಿಲ್ಲದೆ ಹಾಸಿಗೆ ಹಿಡಿದಿದ್ದ ಲಕ್ಷ್ಮಿ ಎಂಬ 70ರ ವೃದ್ಧೆಯನ್ನು ಹೊತ್ತುಕೊಂಡು ಕುಟುಂಬಸ್ಥರು ಸೇತುವೆಯನ್ನು ದಾಟಿದ್ದಾರೆ. ರಸ್ತೆ ಇಲ್ಲದ ಕಾರಣ ತೂಗುಸೇತುವೆ ಮೇಲೆ ವೃದ್ಧೆಯನ್ನು ಎತ್ತಿಕೊಂಡು ಹಳ್ಳಿಗರು ಸಾಗಿದ್ದಾರೆ.

ಈ ಗ್ರಾಮಕ್ಕೆ ರಸ್ತೆ ಇಲ್ಲ. ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆಯೇ ಹಳ್ಳಿಗರು ಪಯಣ ಮಾಡಬೇಕು. ಅಷ್ಟೇ ಅಲ್ಲದೆ ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ, ಕಟ್ಟೆಮನೆ, ಕೋಣೆಮನೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗಳಿಗೆ ರಸ್ತೆಯೇ ಇಲ್ಲ. ದಶಕಗಳಿಂದಲೂ ಭದ್ರಾ ನದಿಯ ತೂಗು ಸೇತುವೆ ಮೇಲಿಂದಲೇ ಜನ ಸಾಗುತ್ತಾರೆ.
ಈ ಹಳ್ಳಿಯಿಂದ ಮುಖ್ಯ ರಸ್ತೆಗೆ ಬರಲು 3 ಕಿ.ಮೀ. ಸೇತುವೆ ಮೂಲಕ ಸಾಗಬೇಕು. ಮಕ್ಕಳು, ವಯಸ್ಸಾದವರು, ಕೆಲಸಕ್ಕೆ ಹೋಗುವವರು ನಿತ್ಯ ಇದೇ ಸೇತುವೆ ಮೂಲಕವೇ ಮುಖ್ಯ ರಸ್ತೆಗೆ ಬರಬೇಕಾದ ಸ್ಥಿತಿ ಇದೆ. ಭದ್ರಾ ನದಿಗೆ ಸೇತುವೆ ನಿರ್ಮಿಸಿಕೊಡುವಂತೆ ಹಳ್ಳಿಗರ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 7 ದಶಕಳಗಿಂದ ನಿರಂತರ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.

ಚಿಕ್ಕಮಗಳೂರು: ವಿದ್ಯುತ್ ತಂತಿ ತುಳಿದು 5 ಹಸು ಸಾವು
ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆಗೆ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಐದು ಹಸುಗಳು ಸಾವನ್ನಪ್ಪಿವೆ. ಕೊಪ್ಪ ತಾಲೂಕಿನ ಹಿರೇಗದ್ದೆ ಸಮೀಪದ ನೇತ್ರಕೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವರು ರೈತರಿಗೆ ಸೇರಿದ 5 ಹಸುಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಹಸು ಕಳೆದುಕೊಂಡ ರೈತರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು: ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಲೋಕಾ ಬಲೆಗೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಥಮ ದರ್ಜೆಯ ಕಾಲೇಜು ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಾಲೆಗೆ ಬಾರದ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆ ಬರೆಯಲು ಅನುಮತಿ ನೀಡುವುದಾಗಿ ಈತ ಹೇಳಿಕೊಂಡಿದ್ದನು. ಹೀಗೆ ಹಣ ಪಡೆಯುವಾಗ ಪ್ರಿನ್ಸಿಪಾಲ್ ಸಿಕ್ಕಿಬಿದ್ದಿದ್ದಾನೆ.
ವಿದ್ಯಾರ್ಥಿಗಳಿಂದ 4000 ಹಣ ಪಡೆಯುವಾಗ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕಡೂರು ತಾಲೂಕಿನ ಬೀರೂರು ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪ್ರಿನ್ಸಿಪಾಲ್ ಪ್ರವೀಣ್, ಎಫ್.ಡಿ.ಎ. ಸದಾಶಿವಯ್ಯ ನನ್ನು ಸದ್ಯ ಅಧಿಕಾರಿಗಳು ಬಂಧಿಸಿದ್ದಾರೆ. 8 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಹಾಜರಾತಿ ಕೊರತೆ ಇತ್ತು.
ಹೀಗಾಗಿ 8 ವಿದ್ಯಾರ್ಥಿಗಳ ಬಳಿಯೂ ಪ್ರಿನ್ಸಿಪಾಲ್ ಹಣಕ್ಕೆ ಬೇಡಿಕೆ ಇಟ್ಟಿದ್ದನು. ಎಫ್.ಡಿ.ಎ. ಸದಾಶಿವಯ್ಯಗೆ ವಿದ್ಯಾರ್ಥಿಗಳು ಫೋನ್ ಪೇ ನಲ್ಲಿ 10000 ಸಾವಿರ ಹಾಕಿದ್ದರು. ಕಳೆದ ದಿನ 4000 ಹಣ ಕ್ಯಾಶ್ ಪಡೆದುಕೊಳ್ಳುವಾಗ ಲೋಕಾ ಟ್ರಾಪ್ ಮಾಡಿತ್ತು. ಆಗ ಈತ ಸಿಕ್ಕಿಬಿದ್ದಾನೆ.












Click it and Unblock the Notifications