Rain: ಮಳೆ ಜೊತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಡ್ರೈನೇಜ್ ವಾಟರ್: ಕೆಟ್ಟ ವಾಸನೆ ಮಧ್ಯೆ ರಾತ್ರಿ ಕಳೆದ ರೋಗಿಗಳು
ಚಿಕ್ಕಮಗಳೂರು ಅಕ್ಟೋಬರ್ 10: ರಾಜ್ಯದಲ್ಲಿ ಹಲವೆಡೆ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ರಾತ್ರಿ ಸುರಿದ ಅಧಿಕ ಮಳೆಗೆ ಚಿಕ್ಕಮಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಆಸ್ಪತ್ರೆ ಒಳಗೆ ನೀರು ತುಂಬಿದ್ದರಿಂದ ರೋಗಿಗಳು ರಾತ್ರಿಯಿಡೀ ಪರದಾಡಿದ್ದಾರೆ.
ಹೌದು... ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ನುಗ್ಗಿ ರೋಗಿಗಳ ಸ್ಥಿತಿ ಹೇಳತೀರದ್ದಾಗಿದೆ. ಮಳೆ ಜೊತೆ ಡ್ರೈನೇಜ್ ವಾಟರ್ ಸೇರಿಕೊಂಡಿದ್ದು, ಆಸ್ಪತ್ರೆ ರೋಗ ಹರಡುವ ಸ್ಥಳವಾಗಿ ಹೋಗಿದೆ. ಆಸ್ಪತ್ರೆಯ ಗ್ರೌಂಡ್ ಫ್ಲೋರ್‌ಗೆ ಡ್ರೈನೇಜ್ ನೀರು ನುಗ್ಗಿದ್ದರಿಂದ ರೋಗಿಗಳು ಒಳ ಪ್ರವೇಶಿಸಲು ಹಾಗೂ ಒಳಗಡೆ ಇದ್ದ ರೋಗಿಗಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡ್ರೈನೇಜ್ ವಾಟರ್ ಜೊತೆ ನೀರು ತುಂಬಿದ್ದರಿಂದ ಕೆಟ್ಟ ವಾಸನೆ ಹರಡಿ ಆಸ್ಪತ್ರೆ ರೋಗಗ್ರಸ್ತ ಸ್ಥಳವಾಗಿದ್ದು ಇಡೀ ರಾತ್ರಿ ಕೆಟ್ಟ ವಾಸನೆ ಮಧ್ಯೆ ಮಳೆ ನೀರಲ್ಲಿ ರೋಗಿಗಳು ಕಾಲ ಕಳೆದಿದ್ದಾರೆ.
ಕಳೆದ ದಿನ ಸುರಿದ ಒಂದು ಗಂಟೆಯ ಧಾರಾಕಾರ ಮಳೆಗೆ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಸರ್ಕಾರಿ ಆಸ್ಪತ್ರೆಯ ಸ್ಥಿತಿ ಕಂಡು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ರೋಗಿಗಳು ಆಗ್ರಹಿಸಿದ್ದಾರೆ. ಆಸ್ಪತ್ರೆ ತುಂಬಾ ನೀರು ತುಂಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಲ್ಲೆಲ್ಲಿ ಮಳೆ?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ರಾಮನಗರ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳಸ, ಬಾಳೆಹೊನ್ನೂರು, ದಾವಣಗೆರೆ, ಸಿದ್ದಾಪುರ, ಬನವಾಸಿ, ಕಾರವಾರ, ಕುಂದಗೋಳ, ಹಾವೇರಿ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಕುಮಟಾ, ಬೆಳಗಾವಿಯಲ್ಲಿ ಮಳೆಯಾಗಿದೆ. ಬೇಲೂರು, ಸೋಮವಾರಪೇಟೆ, ಕುಂದಾಪುರ, ಹೊನ್ನಾವರ, ಉಡುಪಿ, ಧರ್ಮಸ್ಥಳ, ಕೋಟ, ಮಂಕಿ, ನಾಪೋಕ್ಲು, ನಾಯಕನಹಟ್ಟಿ, ಬೈಲಹೊಂಗಲ, ಗೋಕರ್ಣ, ಗೇರುಸೊಪ್ಪ, ಧಾರವಾಡ, ಲಕ್ಷ್ಮೇಶ್ವರ, ಧಾರವಾಡ, ಕಮ್ಮರಡಿ, ಚನ್ನಗಿರಿ, ನರಗುಂದ, ದಾವಣಗೆರೆಯಲ್ಲಿ ಮಳೆಯಾಗಿದೆ.
ಕೊಪ್ಪಳ, ಯಾದಗಿರಿ, ಹಾಸನ, ವಿಜಯಪುರ, ರಾಯಚೂರು, ಕೊಪ್ಪಳ, ವಿಜಯನಗರ, ಬೀದರ್, ಮಂಡ್ಯ, ಕಲಬುರಗಿ, ಮೈಸೂರಿನಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ, ಮಲೆನಾಡು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಧಾರಾಕಾರ ಮಳೆ ಸುರಿದು ಜನ ತತ್ತರಿಸುವಂತೆ ಮಾಡಿದೆ. ಇದೀಗ ದಕ್ಷಿಣ ಕರ್ನಾಟಕದ ಭಾಗದಲ್ಲಿಯೂ ಮಳೆ ಅಬ್ಬರ ಜೋರಾಗಿರಲಿದೆ.ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಅಧಿಕ ಮಳೆಯಾಗಲಿದೆ. ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications