ವೈರಲ್ ಆಯ್ತು "ಅಸಭ್ಯ" ಚಾಟ್; ಭಜರಂಗದಳ ಜಿಲ್ಲಾ ಸಂಯೋಜಕನ ಉಚ್ಚಾಟನೆ
ಚಿಕ್ಕಮಗಳೂರು, ಡಿಸೆಂಬರ್ 2: ವಿ.ಎಚ್.ಪಿ, ಭಜರಂಗದಳದ ನೇತೃತ್ವದಲ್ಲಿ ದತ್ತಮಾಲೆ, ದತ್ತ ಜಯಂತಿ ಆಚರಣೆ ವೇಳೆಯಲ್ಲೇ ಹಿಂದುಪರ ಸಂಘಟನೆ ಮಾನ ತೆಗೆದ ಭಜರಂಗದಳದ ಜಿಲ್ಲಾ ಸಂಯೋಜಕ ತುಡುಕೂರು ಮಂಜು ಎಂಬುವರನ್ನು ಸದ್ದಿಲ್ಲದೇ ಉಚ್ಛಾಟನೆ ಮಾಡಲಾಗಿದೆ.
ಇದಕ್ಕೆಲ್ಲ ಕಾರಣ ಅಸಭ್ಯ ಚಾಟ್. ಹುಡುಗಿಯರ ಜೊತೆ ಅಸಭ್ಯ ರೀತಿಯಲ್ಲಿ ಮೆಸೇಜ್ ಮಾಡಿ ಮಂಚಕ್ಕೆ ಕರೆದಿರುವ ಮೆಸೇಜ್ ಗಳ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈತನನ್ನು ಉಚ್ಚಾಟಿಸುವ ಕ್ರಮ ಕೈಗೊಳ್ಳಲಾಗಿದೆ.
ಫೇಸ್ಬುಕ್, ವಾಟ್ಸಪ್ ನಲ್ಲಿ 10ಕ್ಕೂ ಅಧಿಕ ಹುಡುಗಿಯರ ಜೊತೆ ಅಸಭ್ಯವಾಗಿ ಚಾಟಿಂಗ್ ಮಾಡಿರುವ ಮಂಜುನನ್ನು ಉಚ್ಛಾಟನೆ ಮಾಡುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಭಜರಂಗದಳ ಮುಂದಾಗಿದೆ.

ಉಚ್ಚಾಟನೆಯ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ ಭಜರಂಗದಳ ಪತ್ರಿಕಾ ಪ್ರಕಟಣೆ ಹೊರಡಿಸಿ ಚಿಕ್ಕಮಗಳೂರು ಜಿಲ್ಲಾ ಸಂಯೋಜಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ತುಡುಕೂರು ಮಂಜುನನ್ನು ಜವಾಬ್ದಾರಿಯಿಂದ ಕಿತ್ತು ಹಾಕಿದೆ.












Click it and Unblock the Notifications