Charmadi Ghat: ಮಂಗಳೂರು-ಮೂಡಿಗೆರೆ-ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ₹343.73 ಕೋಟಿ ಬಿಡುಗಡೆ-ಮಾಹಿತಿ
ಮೂಡಿಗೆರೆ, ಜನವರಿ, 21: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅಭಿವುದ್ಧಿಗೆ ಕೇಂದ್ರ ಸರ್ಕಾರ ಬಿಡಿಗಡೆ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ ಇಲ್ಲಿದೆ ನೋಡಿ ಅಂಕಿಅಂಶಗಳ ಮಾಹಿತಿ.
ಮಂಗಳೂರು-ಮೂಡಿಗೆರೆ-ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ವಿಸ್ತರಣೆಗೆ 343.73 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇಪಿಸಿ ಮಾದರಿಯಲ್ಲಿ 10.8 ಕಿಲೋ ಮೀಟರ್ ರಸ್ತೆಯ ವಿಸ್ತರಣೆ ಮಾಡಲಾಗುತ್ತದೆ. ಈ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತನೆ ಆಗಲಿದೆ. ಚಾರ್ಮಾಡಿ ಘಾಟ್‌ನ ಗುಡ್ಡಗಾಡು ಪ್ರದೇಶದಲ್ಲಿ ಕೈಗೆತ್ತಿಕೊಳ್ಳುವಂತಹ ಉಪಕ್ರಮವು ಸವಾಲಿನದ್ದಾಗಿದೆ. ಇದರೊಂದಿದೆ ಸಂಚಾರ ವ್ಯವಸ್ಥೆ ಗಣನೀಯವಾಗಿ ಸುಧಾರಣೆ ಆಗಲಿದೆ" ಎಂದು ತಿಳಿಸಿದ್ದಾರೆ.
ಈ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಪೂರ್ಣ
ಬಹುನಿರೀಕ್ಷಿತ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಈ ಫ್ಲ್ಯಾಟ್‌ಫಾರಗಳನ್ನು ಮೇಲ್ಸೇತುವೆ ಪೂರ್ಣಗೊಂಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ 4 ಮತ್ತು 5ನೆ ಫ್ಲ್ಯಾಟ್ ಫಾರಂಗಳು ಸಿದ್ಧಗೊಂಡಿದ್ದು, ಅವುಗಳನ್ನು ಸಂಪರ್ಕಿಸುವ ಪಾದಾಚಾರಿ ಮೇಲ್ಸೇತುವೆಯೂ ಪೂರ್ಣಗೊಂಡಿವೆ. ಸೆಂಟ್ರಲ್ ನಿಲ್ದಾಣದ ಬಹು ನಿರೀಕ್ಷೆಯ ಫ್ಲಾಟ್ ಫಾರಂ 4 ಮತ್ತು 5ರ ಕಾಮಗಾರಿ ಕಳೆದ ನವೆಂಬರ್‌ನಲ್ಲಿ ಪೂರ್ಣಗೊಂಡು ಬಳಕೆಯಲ್ಲಿದೆ.
ಆರಂಭದಲ್ಲಿ ಈ ನೂತನ ಫ್ಲಾಟ್ ಫಾರಂಗಳನ್ನು ಮಂಗಳೂರು ಸೆಂಟ್ರಲ್‌ಗೆ ಬರುವ ರೈಲುಗಳ ನಿಲುಗಡೆಗಾಗಿ ಬಳಕೆ ಮಾಡುತ್ತಿದ್ದರೆ, ಇದೀಗ ಈ ಫ್ಲಾಟ್ ಫಾರಂಗಳ ಮೂಲಕ ರೈಲುಗಳ ಸಂಚಾರವನ್ನೂ ನಿಧಾನಗತಿಯಲ್ಲಿ ಆರಂಭಿಸಲಾಗಿದೆ. ಈ ನೂತನ ಫ್ಲಾಟ್ ಫಾರಂಗಳು ಬಳಕೆಯಾಗುತ್ತಿವೆ. ಆದರೂ, ಮೇಲ್ಸೇತುವೆಯ ಕೊರತೆಯಿಂದಾಗಿ ಈ ಫ್ಲಾಟ್ ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಫ್ಲಾಟ್‌ಫಾರಂನಿಂದ ನಿಲ್ದಾಣದ ಹಿಂದಿನ ರಸ್ತೆಗೆ ಹೋಗಿ ಮುಖ್ಯ ದ್ವಾರ ಅಥವಾ ಅವರ ಮುಂದಿನ ಪ್ರಯಾಣ ಬೆಳೆಸಲು ತುಂಬಾ ದೂರದವರೆಗೂ ನಡೆದುಕೊಂಡೇ ಹೋಗಬೇಕಿತ್ತು.
ಕೆಲವರು ಫ್ಲಾಟ್‌ಫಾರಂನಿಂದ ಇಳಿದು ಹಳಿಗಳನ್ನು ದಾಟಿ 3ನೇ ಫ್ಲಾಟ್‌ಫಾರಂಗೆ ಹತ್ತಿ ಅಲ್ಲಿಂದ ಮೇಲ್ಸೇತುವೆ ಮೂಲಕ ಮುಖ್ಯ ದ್ವಾರ ತಲುಪಬೇಕಾಗಿತ್ತು. ಆದರೆ ಇದೀಗ ಮೇಲ್ಸೇತುವೆ ನಿರ್ಮಾಣ ಆಗಿರುವುದರಿಂದ ಈ ನೂತನ ಫ್ಲಾಟ್‌ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಮೇಲ್ಸೇತುವೆ ಮೂಲಕ ಮುಖ್ಯದ್ವಾರಕ್ಕೆ ಕಲವೇ ಕ್ಷಣಗಳಲ್ಲು ಹೋಗಬಹುದಾಗಿದೆ.
ಫ್ಲಾಟ್ ಫಾರಂಗಳು ರೈಲು ಸಂಚಾರಕ್ಕೆ ಬಳಕೆ ಆಗುತ್ತಿದ್ದರೂ, ಇನ್ನೂ ಅಧಿಕೃತವಾಗಿ ಫ್ಲಾಟ್ ಫಾರಂಗಳು ಉದ್ಘಾಟನೆ ಆಗಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಫ್ಲಾಟ್ ಫಾರಂಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ, ಪಾದಾಚಾರಿ ಮೇಲ್ಸೇತುವೆಯೂ ಪ್ರಯಾಣಿಕರ ಬಳಕೆಗೆ ಲಭ್ಯ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಇನ್ನೂ ಒಂದು ಪಾದಾಚಾರಿ ಮೇಲ್ಸೇತುವೆ ಹಾಗೂ ಫ್ಲಾಟ್‌ಫಾರಂ ಶೆಲ್ಟರ್ ಕಾಮಗಾರಿ, ಲಿಫ್ಟ್, ಎಕ್ಸಲೇಟರ್ ನಿರ್ಮಾಣ ಆಗಬೇಕಿದೆ ಅಷ್ಟೇ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications