ಕನ್ನಡಿಗರು ಪ್ರಧಾನಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ : ದೇವೇಗೌಡ

Recommended Video

      Lok Sabha Elections 2019 : ಕನ್ನಡಿಗರು ಪ್ರಧಾನಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ : ದೇವೇಗೌಡ | Oneindia Kannada

      ಚಿಕ್ಕಮಗಳೂರು, ಮಾರ್ಚ್ 01: "ಕನ್ನಡಿಗರು ಪ್ರಯತ್ನಿಸಿದರೆ ಮತ್ತೊಮ್ಮೆ ಕನ್ನಡದ ವ್ಯಕ್ತಿಯೇ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೀಡಿದ್ದಾರೆ.

      ಕಡೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, 'ಕನ್ನಡಿಗರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ' ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದರು

      .ನಾನು ಪ್ರಧಾನಿಯಾಗಿದ್ದ ಕಾಲಕ್ಕೂ ಪ್ರಸ್ತುತ ದಿನದ ರಾಜಕೀಯ ಪರಿಸ್ಥಿತಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

      Chances of Kannadiga becoming PM is slim : HD Deve Gowda

      "ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ತಮ್ಮ ಆಶೀರ್ವಾದ ನೀಡಿದರೆ ಕನ್ನಡಿಗರೇ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

      "1996 ರಲ್ಲಿ ಕನ್ನಡಿಗರ ಆಶೀರ್ವಾದದಿಂದ 18 ಲೋಕಸಭಾ ಸೀಟುಗಳನ್ನು ಪಡೆದು ಕನ್ನಡಿಗರಾದ ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದರು. ಇದೀಗ ಮತ್ತೆ 20-22 ಕ್ಷೇತ್ರಗಳನ್ನು ಗೆಲ್ಲುವಂತೆ ನಮಗೆ ಆಶೀರ್ವದಿಸಿದರೆ, ಮತ್ತೊಮ್ಮೆ ಕನ್ನಡಿಗರು ಪ್ರಧಾನಿಯಾಗುವುದಕ್ಕೆ ಸಾಧ್ಯ" ಎಂದು ಕುಮಾರಸ್ವಾಮಿ ಹೇಳಿದ್ದರು.

      ಮಾರ್ಚ್ 08ರಿಂದ ಜೆಪಿ ಭವನದಲ್ಲಿ ವಿಧಾನಸಭಾ ಕ್ಷೇತ್ರವಾರು ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ದೇವೇಗೌಡರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+