Get Updates
Get notified of breaking news, exclusive insights, and must-see stories!

Chaitra Kundapura: ಚೈತ್ರಾ ಕುಂದಾಪುರ "ಟಿಕೆಟ್‌ ಪಾಲಿಟಿಕ್ಸ್‌" ಸಂಭಾಷಣೆಯ ಮತ್ತೊಂದು ಆಡಿಯೋ ವೈರಲ್‌

ಚಿಕ್ಕಮಗಳೂರು, ಸೆಪ್ಟೆಂಬರ್‌, 17: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಸಿದಂತೆ ಮತ್ತೊಂದು ಆಡಿಯೋ ವೈರಲ್‌ ಆಗಿದೆ. ಹಾಗಾದರೆ ಚೈತ್ರಾ ಕುಂದಾಪುರ ಅವರು ಯಾರ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚೈತ್ರಾ ಹಾಗೂ ಪ್ರಸಾದ್ ನಡುವೆ ನಡೆದಿರುವ ಮತ್ತೊಂದು ಆಡಿಯೋ ಬಹಿರಂಗವಾಗಿದ್ದು, ಇದರಲ್ಲಿ ಅಣ್ಣ ಬೆಳಗ್ಗೆ ಫೋನ್ ಮಾಡಿದ್ದರು, ಗಗನ ಹತ್ತಿರವೂ ಅಣ್ಣ ಮಾತನಾಡಿದ್ದಾರೆ. ಈಗಾಗಲೇ ಟಿಕೆಟ್ ವಿಚಾರವಾಗಿ ಡೆಲ್ಲಿಯಿಂದ ಮಾತುಕತೆ ಪೂರ್ಣಗೊಂಡಿದೆ. ಡೆಲ್ಲಿಯಿಂದ ಫೋನ್ ಬಂದಿದೆ ಅಂದರೆ ಕೆಲಸ ಆಗಿದೆ ಎಂದರ್ಥ. ಅಲ್ಲಿಂದ ಮತ್ತೆ ಫೋನ್ ಬಂದರೆ ಗೋವಿಂದ ಪೂಜಾರಿಗೆ ಪಿಕ್ ಮಾಡಲು ಹೇಳು ಎಂದು ಸಂಭಾಷಣೆ ನಡೆಸಿದ್ದಾರೆ.

Chaitra Kundapura fraud case: Ticket Politics conversations Another audio viral

ಸ್ವಾಮೀಜಿ ಪೂಜೆಯಲ್ಲಿದ್ದಾರೆ ಮತ್ತೆ ಮಾತನಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುವ ಸರ್ವೆ ಕಾರ್ಯವನ್ನು ನಾವು ನೋಡಿಕೊಂಡರೆ ಸಾಕು. ದೇವರ ಮೇಲೆ ಭಾರ ಹಾಕಿ ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ ಎಂದು ಪ್ರಸಾದ್ ಜೊತೆ ಚೈತ್ರಾ ಸಂಭಾಷಣೆ ನಡೆಸಿರುವ ಆಡಿಯೋ ಇದೀಗ ವೈರಲ್‌ ಆಗಿದೆ.

ಕಟಿಂಗ್‌ ಶಾಪ್‌ನ ಮಾಲೀಕ ರಾಮುಗೆ ಧಮ್ಕಿ

ಉದ್ಯಮಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 7 ಕೋಟಿ ವಂಚನೆ ಆರೋಪ ಹಿನ್ನೆಲೆ ಹಿಂದೂ ಕಾರ್ಯಕರ್ತೆ ಆಗಿದ್ದ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇನ್ನು ವಂಚನೆ ಪ್ರಕರಣದ ಮಾಸ್ಟರ್‌ ಮೈಂಡ್‌ ಗಗನ್‌ಗೆ ಸಾಥ್‌ ನೀಡಿದ್ದಾರೆ ಎನ್ನಲಾದ ಕಡೂರಿನ ಕಟಿಂಗ್ ಶಾಪ್‌ನ ರಮೇಶ್‌ ಈ ಬಗ್ಗೆ ವಿಡಿಯೋ ಮೂಲಕ ಹೇಳಿಕೆಯೊಂದನ್ನು ನೀಡಿದ್ದರು. ಈ ಬೆನ್ನಲ್ಲೇ ಆರೋಪಿ ಧನ್‌ರಾಜ್‌ ಸ್ನೇಹಿತ ಕಟಿಂಗ್‌ ಶಾಪ್‌ನ ಮಾಲೀಕ ರಾಮುಗೆ ಧಮ್ಕಿ ಹಾಕಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಟ್ಟಿಂಗ್ ಶಾಪ್ ಮಾಲೀಕ ರಾಮುಗೆ ಧನರಾಜ್ ಸ್ನೇಹಿತ ಕಾಂಗ್ರೆಸ್ ಮುಖಂಡ ನೂತನ್ ಧಮ್ಕಿ ಹಾಕಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. "ನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ. ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಅವರೇ ಬರ್ತಾರಾ? ಅಂಗಡಿ ಹೇಗೆ ನಡೆಸುತ್ತೀಯಾ ನೋಡುತ್ತೇನೆ," ಎಂದು ಧಮ್ಕಿ ಹಾಕಿರುವ ಆಡಿಯೋ ವೈರಲ್‌ ಆಗಿದೆ.

ಮತ್ತೊಂದೆಡೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಆರೋಪಿ ಧನರಾಜ್ ಬಂಧನವಾಗುತ್ತಿದ್ದಂತೆ, ಧನರಾಜ್ ಅವರು ಕಡೂರಿನ ಶಾಸಕ ಕೆ.ಎಸ್. ಆನಂದ್‌ ಜೊತೆಗಿರುವ ಫೋಟೋಗಳು ವೈರಲ್ ಆಗುತ್ತಿವೆ. ಧನರಾಜ್ ಶಾಸಕರಿಗೆ‌ ದೂರದ ಸಂಬಂಧಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಧನರಾಜ್ , ಗಗನ್, ಚೈತ್ರಾ ಕುಂದಾಪುರ, ರಮೇಶ್ ಗೋವಿಂದ ಬಾಬುಗೆ ವಂಚನೆ ಮಾಡಿದವರಾಗಿದ್ದಾರೆ ಎನ್ನಲಾಗಿದೆ.

ಸ್ಫೋಟಕ ಮಾಹಿತಿ ಬಹಿರಂಗ

ವಂಚನೆಗೆ ಸಹಾಯ ಮಾಡುತ್ತಿದ್ದರೆನ್ನಲಾದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಧನರಾಜ್ ಮತ್ತು ರಮೇಶ್ ಎನ್ನುವವರು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಉದ್ಯಮಿಗೆ ವಂಚಿಸಲು ನಕಲಿ ಬಿಜೆಪಿ, ಆರ್‌ಎಸ್‌ಎಸ್‌ ನಾಯಕರನ್ನು ಚೈತ್ರಾ ಕುಂದಾಪುರ ಮತ್ತು ತಂಡ ಸೃಷ್ಟಿಸುತ್ತಿದ್ದರು ಎನ್ನಲಾಗಿದ್ದು, ಇದೀಗ ಅದೇ ಟೀಂನ ಕಡೂರಿನ ಧನರಾಜ್ ಮತ್ತು ರಮೇಶ್ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಅನುಕೂಲ ಆಗುತ್ತದೆ ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೀವಿ ಎಂದು ವೀಡಿಯೋ ಮಾಡುವ ಮೂಲಕ ಚೈತ್ರಾ ಕುಂದಾಪುರ ವಿರುದ್ಧ ಆರೋಪ ಮಾಡಿದ್ದಾರೆ.

ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಎಂದು ನಮಗೆ ಗೊತ್ತಿರಲಿಲ್ಲ. ನಾನು ಹೇಳಿದ ರೀತಿಯಲ್ಲಿ ನೀವು ನಟಿಸಿ ಎಂದು ಹೇಳಿದ್ದರು. ನಾವು ಹಾಗೇ ಮಾಡಿದ್ವಿ ಅಷ್ಟೇ. ದೊಡ್ಡ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ಕ್ರಿಯೆಟ್ ಮಾಡಿದ್ದು ಗಗನ್. ಟಿಕೆಟ್ ನೀಡಿದರೆ ಅವರು ಗೆಲ್ಲುತ್ತಾರೆ, ಆಗ ನಿಮಗೆ ಸಹಾಯ ಆಗುತ್ತದೆ ಎಂದಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್‌ನಲ್ಲಿ​ ಕೆಲಸ ಮಾಡುತ್ತಿದ್ದ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರ್‌ಎಸ್‌ಎಸ್‌ ಪ್ರಚಾರಕರು ಮತ್ತು ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್​ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಚೈತ್ರಾ ಪರಿಚಯಿಸಿದ್ದರು ಎಂದು ತಿಳಿದುಬಂದಿದೆ.

ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದ ಬಾಬು ಪೂಜಾರಿ ಮುಂದೆ ಹೇಗೆ ನಟಿಸಬೇಕು ಎಂದು ಮೊದಲೇ ಸೂಚನೆ ನೀಡಿದ್ದರು. ಅಲ್ಲದೆ ಚೈತ್ರಾ, ನಕಲಿ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರಿಗೆ ಕಡೂರಿನ ಮನೆಯೊಂದರಲ್ಲಿ ತರಬೇತಿ ನೀಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಈ ಕೆಲಸಕ್ಕೆ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ವ್ಯಕ್ತಿಗೆ ಚೈತ್ರಾ ಮತ್ತು ಗಗನ್ ಹಣ ನೀಡಿದ್ದರು. ಸಲೂನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಗಗನ್ ಮತ್ತು ಧನರಾಜ್ ಎಂಬವರಿಗೂ ನಟನೆ ಮಾಡಲು ಹಣ ಕೊಟ್ಟಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+