ಎ.ಮಂಜು ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ:ಪ್ರಜ್ವಲ್ ರೇವಣ್ಣ ವಾಗ್ದಾಳಿ
Recommended Video

ಚಿಕ್ಕಮಗಳೂರು, ಏಪ್ರಿಲ್ 09:ಅಂದು ಸಿದ್ರಾಮಣ್ಣನವ್ರು, ಇಂದು ಯಡಿಯೂರಪ್ಪನವ್ರು, ನಾಳೆ ನಿಮ್ಮ ಮನೆಗೆ ಎ.ಮಂಜು ಬಂದ್ರೂ ಆಶ್ಚರ್ಯವಿಲ್ಲ. ಅಂತ ಲಜ್ಜೆಗೆಟ್ಟ ರಾಜಕಾರಣ ಮಾಡ್ತಿದ್ದಾರೆ ಎ.ಮಂಜು ಎಂದು ಅರಕಲಗೂಡು ಜನರೇ ಹೇಳ್ತಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂಬತ್ತು ತಿಂಗಳಲ್ಲೇ ಸೋಲನ್ನು ಅನುಭವಿಸಿರೋ ಎ.ಮಂಜು ಅವರು ಅಧಿಕಾರವಿಲ್ಲದೆ ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ. ಅಧಿಕಾರ ಹಾಗೂ ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದು ಕಿಡಿಕಾರಿದರು.
ಮೇ 23ಕ್ಕೆ ಅವರು ಮತ್ತೆ ಮನೆಗೆ ಹೋಗುವಂತ ಕೆಲಸವಾಗುತ್ತೆ. ಆಗ ಅವರು, ಮತ್ತೆ ಬಿಎಸ್ ವೈ ಬಿಟ್ಟು ಬೇರೆ ಪಕ್ಷ ನೋಡ್ತಾರೆ. ಇನ್ನು ಸದಾ ಅಭಿವೃದ್ಧಿ ರಾಜಕಾರಣಕ್ಕೆ ಹೆಸರಾಗಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲೀಗ ಜಾತಿ ರಾಜಕಾರಣವೂ ಆರಂಭವಾಗಿದೆ ಎಂದು ಪ್ರಜ್ವಲ್ ಹೇಳಿದರು.

ಎ.ಮಂಜು ಅವ್ರು ಎಷ್ಟು ವೀರಶೈವ ನಾಯಕರನ್ನ ಗೆಲ್ಲಿಸಿದ್ದಾರೆ ಎಂದು ಪ್ರಶ್ನಿಸಿದ ಪ್ರಜ್ವಲ್, ನಮಗೆ ವೀರಶೈವರ ಮೇಲೆ ಪ್ರೀತಿ ಇಲ್ಲವೆ, ಪ್ರೀತಿ ಇಲ್ಲದೆ ಬೇಲೂರಿನಲ್ಲಿ ಕ್ಷೇತ್ರ ತ್ಯಾಗ ಮಾಡಿ ಲಿಂಗೇಶ್ ರನ್ನ ಗೆಲ್ಲಿಸಿದ್ವಾ. ಜೀವನ ಪೂರ್ತಿ ವೀರಶೈವರನ್ನ ತುಳಿದೋರು, ಈಗ ಬಿಜೆಪಿ ಸೇರಿದ್ದೇನೆಂದು ಯಾವ ನೈತಿಕತೆ ಇಟ್ಕೊಂಡು ವೀರಶೈವ ಮತ ಕೇಳ್ತಿದ್ದಾರೆಂದು ನನಗೆ ಗೊತ್ತಿಲ್ಲ ಎಂದು ಟೀಕಿಸಿದರು.












Click it and Unblock the Notifications