ಕಾರು, ಸ್ಕೂಟಿ ಡಿಕ್ಕಿ: ಪವಾಡ ಸದೃಶ ಪಾರಾದ ಯುವತಿ
ಚಿಕ್ಕಮಗಳೂರು, ಮಾರ್ಚ್ 05 : ಕಾರು ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಯುವತಿ ಸ್ಕೂಟಿಯಿಂದ ಹಾರಿ ಬಿದ್ದು ಪವಾಡ ಸದೃಶವಾಗಿ ಪಾರಾಗಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಕಾರು ,ಮತ್ತು ಸ್ಕೂಟಿ ಎರಡೂ ವೇಗವಾಗಿ ಬಂದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಯುವತಿ ಹಾರಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

21 ವರ್ಷದ ಅನುಷಾ ಅಪಾಯದಿಂದ ಪಾರಾದ ಯುವತಿ. ಸ್ಕೂಟಿಯಲ್ಲಿ ಕಾರ್ ಸ್ಟಾಂಡ್ ಮುಂಭಾಗ ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅನುಷಾ ರಸ್ತೆಗೆ ಬಿದ್ದಿದ್ದಾಳೆ. ಘಟನೆಯಿಂದ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಭಯಾನಕ ದೃಶ್ಯ ಸಮೀಪದಲ್ಲೇ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಸ್ತೆಗೆ ಬಿದ್ದ ಅನುಷಾ ಅವರನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.












Click it and Unblock the Notifications