ಮೂಡಿಗೆರೆ ಬಳಿ ಕೆಸರಿನಲ್ಲಿ ಹೂತ ಬಸ್; ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಚಿಕ್ಕಮಗಳೂರು, ಜುಲೈ 4: ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದು ರಸ್ತೆ ಬದಿಯ ಕೆಸರಿನಲ್ಲಿ ಹೂತುಕೊಂಡಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಬಳಿ ನಡೆದಿದೆ.
ಮೂರ್ನಾಲ್ಕು ದಿನಗಳಿಂದ ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ರಸ್ತೆಯ ಇಕ್ಕೆಲಗಳ ಮಣ್ಣೂ ತೇವಗೊಂಡಿದೆ. ತೇವಗೊಂಡಿರುವ ಮಣ್ಣು ಕೆಸರಿನಂತಾಗಿದ್ದು, ಬಸ್ ಓಡಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಂದ ಬಸ್, ಆ ಕೆಸರಿನಲ್ಲಿ ಸಿಲುಕಿಕೊಂಡಿದೆ.

ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯಬೇಕಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಈ ಅವಘಡ ತಪ್ಪಿದೆ.











Click it and Unblock the Notifications