ಜ್ಯೂಸ್ ಎಂದು ಕಳೆನಾಶಕ ಕುಡಿದ ಮಗು ಕೊನೆಗೂ ಬದುಕಲಿಲ್ಲ
ಚಿಕ್ಕಮಗಳೂರು, ನವೆಂಬರ್ 12: ಜ್ಯೂಸ್ ಎಂದು ತಿಳಿದು ಕಳೆನಾಶಕವನ್ನು ಕುಡಿದು ಪುಟ್ಟ ಹುಡುಗ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಪ್ರವೀಣ್-ಪೂಜಿತ ದಂಪತಿಯ ಏಕೈಕ ಪುತ್ರ ಅಗಸ್ತ್ಯ (3). ಅಕ್ಟೋಬರ್ 24ರಂದು ಅಗಸ್ತ್ಯ ಜ್ಯೂಸ್ ಎಂದು ತಿಳಿದು ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ಕುಡಿದು ಅಸ್ವಸ್ಥಗೊಂಡಿದ್ದ.

ಅಂದೇ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 18 ದಿನಗಳಿಂದ ಅಗಸ್ತ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications