ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿಯ ಮಡಿಲಲ್ಲಿ ಮಲಗಿದ್ದ 11 ತಿಂಗಳ ಮಗು ಕಳ್ಳತನ!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 28; ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅದು ಎಂಥದ್ದೇ ಒತ್ತಡವಿದ್ದರೂ ಮುದ್ದು ಕಂದಮ್ಮಗಳ ಮುಖ ನೋಡಿದ್ರೆ ಎಲ್ಲವೂ ಮಾಯವಾಗಿ ಬಿಡುತ್ತೆ. ಮಕ್ಕಳಿರಲವ್ವ ಮನೆ ತುಂಬಾ...ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಎಂಬ ಜಾನಪದ ಹಾಡು ಸಹ ಚಾಲ್ತಿಯಲ್ಲಿದೆ.

ಆ ದಂಪತಿ ತಮ್ಮ ಮುದ್ದು ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆದರೆ, ಮಗ್ಗುಲಲ್ಲಿ ಮಲಗಿಸಿಕೊಂಡಿದ್ದ ಮಗು, ಮಾಯವಾಗಿಬಿಡುತ್ತದೆ ಎಂದು ದಂಪತಿ ಅಂದುಕೊಂಡಿರಲಿಲ್ಲ. ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವೇ ಕಾಣೆಯಾದ ಘಟನೆ ನಡೆದಿದೆ.

ಹೆತ್ತ ಮಗು ತಾಯಿಯ ಮಡಿಲು ಸೇರಲು 2,000 ರೂಪಾಯಿ ಲಂಚ! ಹೆತ್ತ ಮಗು ತಾಯಿಯ ಮಡಿಲು ಸೇರಲು 2,000 ರೂಪಾಯಿ ಲಂಚ!

ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ಶ್ವೇತಾ ಮತ್ತು ಶ್ರೀನಿವಾಸ್ ದಂಪತಿಯ 11 ತಿಂಗಳ ಮಗು ಅನಿಶಾಳನ್ನು ಕಳ್ಳತನ ಮಾಡಲಾಗಿದೆ. ತಂದೆ-ತಾಯಿಯ ಜೊತೆ ಮಲಗಿದ್ದ ಕಂದಮ್ಮನನ್ನು ಮನೆಗೆ ನುಗ್ಗಿದ ಕಿರಾತಕರು ಕದ್ದು ಪರಾರಿಯಾಗಿದ್ದಾರೆ.

ಕೊಪ್ಪ ಸರ್ಕಾರಿ ವೈದ್ಯರಿಂದಲೇ ಮಗು ಮಾರಾಟ? ನಾಲ್ವರ ಮೇಲೆ FIR ದಾಖಲುಕೊಪ್ಪ ಸರ್ಕಾರಿ ವೈದ್ಯರಿಂದಲೇ ಮಗು ಮಾರಾಟ? ನಾಲ್ವರ ಮೇಲೆ FIR ದಾಖಲು

ಹಾಲುಗಲ್ಲದ ಕಂದಮ್ಮನನ್ನು ಕದ್ದುಕೊಂಡು ಹೋಗಿರುವುದು ಈ ದಂಪತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಹೇಗಾದರೂ ಮಾಡಿ ಮಗುವನ್ನು ಹುಡುಕಿಕೊಡಿ ಎಂದು ಕಂಡ ಕಂಡವರ ಬಳಿ ಗೋಗರೆಯುತ್ತಿದ್ದಾರೆ. ಮಗುವಿವಾಗಿ ಹುಡುಕಾಟವೂ ನಡೆಯುತ್ತಿದೆ.

 ಮಂಡ್ಯ; ರಸ್ತೆ ಹಂಪ್ ದಾಟುವಾಗ ಬೈಕಿನಿಂದ ಬಿದ್ದು ಮಗು ಸಾವು ಮಂಡ್ಯ; ರಸ್ತೆ ಹಂಪ್ ದಾಟುವಾಗ ಬೈಕಿನಿಂದ ಬಿದ್ದು ಮಗು ಸಾವು

ಮೂರು ದಿನಗಳ ಹಿಂದೆ ಮಗು ಕಾಣೆ

ಮೂರು ದಿನಗಳ ಹಿಂದೆ ಮಗು ಕಾಣೆ

ಮೂರು ದಿನಗಳ ಹಿಂದೆ ರಾತ್ರಿ ವೇಳೆ ಮಗುವನ್ನು ಕದಿಯಲಾಗಿದೆ. 2 ವರ್ಷದ ಹಿಂದೆ ಶ್ವೇತಾ ಮತ್ತು ಶ್ರೀನಿವಾಸ್ ವಿವಾಹವಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಗಳು ಮಗುವನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಮನೆಯಲ್ಲಿ ಬಡತನವಿದ್ದರೂ ಮಗುವಿಗೆ ಕೊಡುವ ಪ್ರೀತಿಯಲ್ಲಿ ಯಾವುದೇ ಬಡತನವಿರಲಿಲ್ಲ. ರಾಣಿಯಂತೆ ಮಗಳನ್ನು ಈ ದಂಪತಿ ನೋಡಿಕೊಳ್ಳುತ್ತಿದ್ದರು.

ಬಾಗಿಲು ಸರಿ ಇರಲಿಲ್ಲ

ಬಾಗಿಲು ಸರಿ ಇರಲಿಲ್ಲ

ಶ್ವೇತಾ ಮತ್ತು ಶ್ರೀನಿವಾಸ್ ದಂಪತಿ ಹೊಸಮನೆಯನ್ನು ಕಟ್ಟಿಸಿದ್ದರು. ಆದ್ದರಿಂದ, ಮನೆಯ ಬಾಗಿಲು ಸರಿ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡವರು, ರಾತ್ರಿ ಮನೆಗೆ ನುಗ್ಗಿ ಮಗುವನ್ನು ಕಳ್ಳತನ ಮಾಡಿದ್ದಾರೆ. ಬಡಾವಣೆಗೆ ಟಬ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ನಾಲ್ವರು ಹೆಂಗಸರು ಬರುತ್ತಿದ್ದರು. ಅವರೇ ಕದ್ದಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಮಹಿಳೆಯರು ಕೂಡಾ ನಾಪತ್ತೆ

ಮಹಿಳೆಯರು ಕೂಡಾ ನಾಪತ್ತೆ

ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ಬರುತ್ತಿದ್ದ ಹೆಂಗಸರು ಮಗುವನ್ನು ಆಗಾಗ ನೋಡೋದು, ಮಾತನಾಡಿಸುವುದು ಮಾಡುತ್ತಿದ್ದರು. ಮಗು ಕಾಣೆಯಾದ ಬಳಿಕ ಮಹಿಳೆಯರು ಸಹ ನಾಪತ್ತೆಯಾಗಿದ್ದಾರೆ. ಆದ್ದರಿಂದ, ದಂಪತಿ ಸೇರಿದಂತೆ ನೆರೆಹೊರೆಯವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಮಗು ನಾಪತ್ತೆ ಕುರಿತು ದೂರು ದಾಖಲು ಮಾಡಲಾಗಿದೆ.

Recommended Video

ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada
ಮಗುವನ್ನು ಹುಡುಕಿಕೊಡಿ

ಮಗುವನ್ನು ಹುಡುಕಿಕೊಡಿ

ಮಗು ಜೊತೆಯಲ್ಲಿ ಇಲ್ಲ ಅನ್ನುವುದನ್ನು ತಾಯಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅನ್ನ, ನೀರು ಬಿಟ್ಟು ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಬಡಾವಣೆಯ ಪ್ರತಿಯೊಬ್ಬರ ಬಳಿಯೂ ಮಗುವನ್ನು ಹುಡುಕಿಕೊಡಿ ಅಂತಾ ಅಂಗಲಾಚುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸಿ ಮಗುವನ್ನು ಹುಡುಕಬೇಕಿದೆ.

English summary
11 months old baby girl stolen from home in Kaduru, Chikkamagaluru. People alleged that women who come to sell plastic items stolen baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X