ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಿನಲ್ಲಿ ಮುಂದುವರೆದ ಹುಲಿ ದಾಳಿ, ಮತ್ತೊಂದು ಹಸು ಬಲಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 28: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದಲ್ಲಿ ಮೇಯಲು ಹೋಗಿದ್ದ ಹಸುವಿನ ಮೇಳೆ ಹುಲಿ ದಾಳಿ ಕೊಂದು ಹಾಕಿದೆ. ಬಾನಳ್ಳಿ ಗ್ರಾಮದ ಸುಂದರೇಶ್ ಎಂಬುವರ ಹಸು ವ್ಯಾಘ್ರನ ಬಾಯಿಗೆ ಬಲಿಯಾಗಿದೆ. ಮೂಡಿಗೆರೆ ತಾಲೂಕಿನ ಹಲವೆಡೆ ಇತ್ತೀಚೆಗೆ ಹುಲಿ ದಾಳಿ ಪ್ರಕರಣ ಹೆಚ್ಚಾಗುತ್ತಿದ್ದು, ದಿನಕ್ಕೊಂದು ಹಸು ಹುಲಿ ಬಾಯಿಗೆ ತುತ್ತಾಗುತ್ತಿದೆ. ಬಾನಳ್ಳಿ, ಮತ್ತಿಕಟ್ಟೆ, ಹೊಸಳ್ಳಿ, ಭಾರತೀ ಬೈಲು ಸುತ್ತಮುತ್ತ ಹುಲಿ ಅಡಾಡುತ್ತಿದ್ದು, ಅಲ್ಲಿನ ಸ್ಥಳಿಯರು ಆತಂಕದಿಂದ ಜೀವನ ಸಾಗಿಸುವಂತಾಗಿದೆ.

ಗ್ರಾಮಗಳಲ್ಲಿ ಅಲ್ಲಲ್ಲೇ ಹುಲಿ ಹೆಜ್ಜೆಯನ್ನು ನೋಡುತ್ತಿರುವ ಸ್ಥಳೀಯರು ಹೆದರಿ ಮನೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಜನಸಾಮಾನ್ಯರು ತೋಟಗಳಿಗೆ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ಹುಲಿಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ. ಈಗಾಗಲೇ 30ಕ್ಕೂ ಹೆಚ್ಚು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಜನರು ಮನೆಯಿಂದ ಹೊರಬರುವುದಕ್ಕೂ ಆತಂಕಪಡುವ ಸನ್ನಿವೇಶ ನಿರ್ಮಾಣ ಆಗಿದೆ. ಹಾಗಾಗಿ ಸ್ಥಳೀಯರು ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮರಾಜನಗರ: ಹಸು ಕೊಂದು, ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆಚಾಮರಾಜನಗರ: ಹಸು ಕೊಂದು, ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ

ಮುಂದುವರೆದ ಹುಲಿ ಆರ್ಭಟ, ಬೆಚ್ಚಿದ ಮಲೆನಾಡಿಗರು

Another Tiger Attack Incident in Chikkamagaluru: Cattle Eaten By Wild Animal
ಮಲೆನಾಡಿನಲ್ಲಿ ಹುಲಿ ಆರ್ಭಟ ಮುಂದುವರೆದಿದ್ದು, ಹುಲಿಯ ದಾಳಿಯಿಂದ ಮಲೆನಾಡಿಗರು ಬೆಚ್ಚಿಬಿದಿದ್ದಾರೆ‌. ಕಳೆದ ಕೆಲವು ದಿನಗಳಿಂದ ಮೂಡಿಗೆರೆ ತಾಲೂಕಿನ ಬಾನಳ್ಳಿ, ಮತ್ತಿಕಟ್ಟೆ, ಹೊಸಳ್ಳಿ, ಭಾರತೀ ಬೈಲು ಸುತ್ತಮುತ್ತ ಹುಲಿ ಓಡಾಡುತ್ತಿದ್ದು, ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿವೆ. ಇನ್ನು ಹುಲಿ ನಿರಂತರವಾಗಿ ದಾಳಿ ಮಾಡಿ ಜಾನುವಾರುಗಳನ್ನು ಕೊಲ್ಲುತ್ತಿವೆ. ಇದರಿಂದ ಮಲೆನಾಡಿಗರು ನಿಬ್ಬೆರಗಾಗಿ ಹೋಗಿದ್ದಾರೆ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಗ್ರಾಮಗಳ ಬಳಿ ಅಡ್ಡಾಡುತ್ತಿರುವ ಹುಲಿಗಳನ್ನು ಸೆರೆ ಹಿಡಿದು ನಮ್ಮನ್ನು ರಕ್ಷಣೆ ಮಾಡಿ ಎಂದು ಸ್ಥಳೀಯರು ಬೇಡಿಕೊಳ್ಳುತ್ತಿದ್ದಾರೆ.
English summary
A cow has died after attack by a tiger at Banalli village, Mudigere taluk in Chikkamgaluru district. This adds to the long list of cattles eaten up by tiger recent times. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X