ಚಿಕ್ಕಮಗಳೂರಿನಲ್ಲಿ ಮಚ್ಚು ಹಿಡಿದ ಮಹಿಳೆ ಕಂಡು ಭಯಗೊಂಡ ಜನ
Recommended Video

Deepavali 2018 : ದೀಪಾವಳಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವುದು ಹೇಗೆ? | Oneindia Kannada
ಚಿಕ್ಕಮಗಳೂರು, ನವೆಂಬರ್.05:ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ (ನ.04) ಮಚ್ಚು ಹಿಡಿದು ಓಡಾಡುತ್ತಿದ್ದ ಮಹಿಳೆಯೊಬ್ಬರು "ಯಾರಾದರೂ ಮಾತನಾಡಿದರೆ ತಲೆ ಕಡಿಯುತ್ತೇನೆ" ಎಂದು ಹೇಳುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಓಡಾಡಿಕೊಂಡಿದ್ದ ಈ ಮಹಿಳೆಯನ್ನು ಮಾನಸಿಕ ಅಸ್ವಸ್ಥಳು ಎಂದು ಗುರುತಿಸಲಾಗಿದೆ. ಮಹಿಳೆ ರಾತ್ರಿಯಿಡೀ ಮಚ್ಚು ಹಿಡಿದು ಓಡಾಡುತ್ತಿರುವುದನ್ನು ಕಂಡ ಜನ, ಪ್ರಯಾಣಿಕರು ಗಾಬರಿ ಬಿದ್ದಿದ್ದಾರೆ.
ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ಹಾಗೂ ಪೊಲೀಸರು ಮಹಿಳೆ ಕೈಯಿಂದ ಮಚ್ಚು ಕಸಿದುಕೊಳ್ಳಲು ಮುಂದಾಗಿದ್ದಾರೆ. ಪೊಲೀಸರಿಗೂ ಕ್ಯಾರೆ ಎನ್ನದ ಮಾನಸಿಕ ಅಸ್ವಸ್ಥ ಮಹಿಳೆ ಹತ್ತಿರ ಬಂದರೆ ತಲೆ ಕಡಿದು ಬಿಡುತ್ತೇನೆ ಎಂದು ಹೆದರಿಸಿ ಕೊನೆಗೆ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದೀಗ ಸಾಮಾಜಿಕತಾಣದಲ್ಲಿ ಮಹಿಳೆ ಮಚ್ಚು ಹಿಡಿದು ಓಡಾಡುತ್ತಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ.












Click it and Unblock the Notifications