ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು- ಸಿ.ಟಿ.ರವಿ

ಚಿಕ್ಕಮಗಳೂರು, ಆಗಸ್ಟ್‌ 13: ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ದೇಶ ಮತ್ತು ರಾಜ್ಯದಲ್ಲಿ ನಡೆದಿರುವ ಪ್ರಮುಖ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ರಷ್ಟು ಹಗರಣಗಳು ಕಾಂಗ್ರೆಸ್ ಅವಧಿಯಲ್ಲಿ ನಡೆದಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ದೇಶದಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ, ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಕೈ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

90% Of The Scams Took Place During The Congress Period: CT Ravi

ನಾವು ಚುನಾವಣೆ ಗೆಲ್ಲಲು ಎಷ್ಟೆಲ್ಲಾ ಖರ್ಚು ಮಾಡಿದ್ದೇವೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತಿದ್ದೀವಾ?, ಖರ್ಚು ಮಾಡಿರುವುದು ವಸುಲಾಗಬೇಕಲ್ಲವೇ? ಇಲ್ಲಾಂದರೆ ನಮ್ಮ ಹೆಂಡತಿ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸಬೇಕಾ..? ಎಂದು ಮಾತನಾಡುವ ಸ್ಥಿತಿ ಕಾಂಗ್ರೆಸ್ ನಾಯಕರದ್ದಾಗಿದೆ ಎಂದು ರವಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ 40% ಕಮಿಷನ್ ದಂಧೆ ಈಗ 15% ಆಗಿರಬಹುದು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಗಮನಿಸಿದ್ದೇನೆ, ಆದರೆ ನೀವು ಹೇಳುತ್ತಿರುವ 15% ಹಳೆಯ ವಿಚಾರ ಈಗ ಅದು 50% ದಾಟಿರಬಹುದು. ಡಿ.ಕೆ ಶಿವಕುಮಾರ್‌ ಅವರ ಸರ್ಕಾರ ಪ್ರಾಮಾಣಿಕ ಎನ್ನುವುದಾದರೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ ರವಿ ಇದೇ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.

ಗುತ್ತಿಗೆದಾರರ ಬಳಿಯಿಂದ ನನಗೆ ಬಂದಿರವ ಮಾಹಿತಿ ಪ್ರಕಾರ, ಮೊದಲಿಗೆ 7% ಕಮಿಷನ್ ನಿಗದಿಪಡಿಸಿದ್ದರು. ಆದರೆ ಮಧ್ಯವರ್ತಿಗಳು 10%ಗೆ ಪಟ್ಟು ಹಿಡಿದ ಬಳಿಕ ಇದೀಗ 15% ಫಿಕ್ಸ್ ಮಾಡಿ, ಅಷ್ಟು ಕೊಟ್ಟರೆ ಮಾತ್ರ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ ಎಂದು ಸಿ.ಟಿ ರವಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಪೇದೆ ವರ್ಗಾವಣೆ ನನ್ನ ಪಾತ್ರ ಇಲ್ಲ - ಶಾಸಕ ಕೆ.ಎಸ್‌.ಆನಂದ್

ಚಿಕ್ಕಮಗಳೂರು: ವರ್ಗಾವಣೆಯಾಗಿದ್ದಕ್ಕೆ ನನ್ನ ಟ್ರನ್ಸ್‌ಫರ್‌ ಆಗಲು ಶಾಸಕನೇ ಕಾರಣ ಎಂದು ಮಹಿಳಾ ಪೇದೆ ಶಾಸಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕಿಳಿದ ಪ್ರಕರಣಕ್ಕೆ ಸಂಬಂಧಪಟ್ಟಕ್ಕೆ ಶಾಸಕ ಕೆ.ಎಸ್.ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಕಡೂರಿನಲ್ಲಿ ಮಾತಾನಾಡಿದ ಅವರು ಆಕೆ ಯಾರೆಂದೇ ನನಗೆ ಗೊತ್ತಿಲ್ಲ, ಮಹಿಳಾ ಪೇದೆಯ ಆರೋಪವನ್ನ ಶಾಸಕ ಆನಂದ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಅವರ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಈ ವಿಚಾರವಾಗಿ ನಾನು ಯಾವುದೇ ಲೇಟರ್ ಕೂಡ ನೀಡಿಲ್ಲ. ಇದು ಪೊಲೀಸ್ ಇಲಾಖೆಯಲ್ಲಿನ ಜನರಲ್ ಟ್ರಾನ್ಸ್‌ಫರ್ ಇರಬಹುದು. ನನಗೆ ಯಾವುದೇ ಮಾಹಿತಿಯಿಲ್ಲ. ನನಗೆ ಆಕೆ ಯಾರೆಂಬುದೇ ಗೊತ್ತಿಲ್ಲ. ನಾನು ಆಕೆ ಮುಖ ನೋಡಿದ್ದೇ ನಮ್ಮ ಮನೆಗೆ ಬಂದಾಗ. ಕಡೂರಿಗೆ ಬರುವವರಿಗೆ-ಹೋಗುವವರಿಗೆ ಪತ್ರ ನೀಡಿದ್ದೇನೆ. ಆದರೆ, ಇವರ ವಿಚಾರದಲ್ಲಿ ನನಗೇನು ಗೊತ್ತಿಲ್ಲ. ನಾನೇಕೆ ಅವರನ್ನು ವರ್ಗಾವಣೆ ಮಾಡಿಸಲಿ ಎಂದಿದ್ದಾರೆ.

ಇದು ರಾಜಕೀಯ ಪ್ರೇರಿತ ಇರಬಹುದು. ರಾಜಕೀಯ ವೈಷಮ್ಯಕ್ಕೆ ಈ ರೀತಿ ಮಾಡಿಸಿರಬಹುದು. ಶಿಸ್ತು ಕಾಪಾಡುವ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಶಾಸಕ ಸ್ಥಾನಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿರುವುದರ ಕುರಿತು ಘಟನೆಯ ಬಗ್ಗೆ ವಿಧಾನಸಭೆಯ ಸ್ಪೀಕರ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+