ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕಿಗಾಗಿ ತೀವ್ರ ಹುಡುಕಾಟ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ: ಕಾಫಿನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಸೋಮವಾರ ಕಾಲು ಕೆಸರಾಗಿದೆ ಎಂದು ತೊಳೆದುಕೊಳ್ಳುವುದಕ್ಕೆ ಹಳ್ಳಕ್ಕೆ ಇಳಿದಿದ್ದ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. ಒಂದನೇ ತರಗತಿಯ ಬಾಲಕಿ ಸುಪ್ರಿತಾಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತಿದೆ.

ಸುಪ್ರಿತಾ ಹಾಗೂ ಆಕೆಯ ಅಣ್ಣನ ಶಾಲೆಯನ್ನು ಮುಗಿಸಿ ಮನೆಗೆ ವಾಪಸ್ ಬರುವ ವೇಳೆ ಕಾಲಿಗೆ ಕೆಸರಾಗಿದೆ ಎಂದು ಇಬ್ಬರು ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. 6 ಅಗ್ನಿಶಾಮಕ ತಂಡಗಳ 36 ಸಿಬ್ಬಂದಿ ಬಾಲಕಿ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಗ್ನಿಶಾಮಕ ದಳದ ಜೊತೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಕೂಡ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಸೇತುವೆಗಳು ಮುಳುಗಡೆ, ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಸೇತುವೆಗಳು ಮುಳುಗಡೆ, ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

 ವಾರದ ನಂತರ ಶಾಲೆಗೆ ಹೋಗಿದ್ದ ಬಾಲಕಿ

ವಾರದ ನಂತರ ಶಾಲೆಗೆ ಹೋಗಿದ್ದ ಬಾಲಕಿ

ಇನ್ನು ಬಾಲಕಿ ಕಳೆದ ಒಂದು ವಾರದಿಂದ ಆನಾರೋಗ್ಯದ ಕಾರಣದಿಂದ ಶಾಲೆಗೆ ಹೋಗಿರಲಿಲ್ಲ. ಸೋಮವಾರ ಶಾಲೆಗೆ ಹೋಗಿದ್ದಳು. ಆದರೆ ಸಂಜೆ ಬರುವಾಗ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ವಿಷಯ ತಿಳಿದ ಸ್ಥಳೀಯರು ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದರಾದರೂ ಬಾಲಕಿ ಪತ್ತೆಯಾಗಲಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಹುಡುಕುವ ಪ್ರಯತ್ನ ಮಾಡಿದರೂ ಬಾಲಕಿ ಮಾತ್ರ ಪತ್ತೆಯಾಗಿರಲಿಲ್ಲ.

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ, ಹೆಬ್ಬಾಳೆ ಸೇತುವೆ ಮುಳುಗಡೆ, ಸಂಚಾರ್ ಬಂದ್ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ, ಹೆಬ್ಬಾಳೆ ಸೇತುವೆ ಮುಳುಗಡೆ, ಸಂಚಾರ್ ಬಂದ್

 ಎರಡನೇ ದಿನವೂ ಸಿಗದ ಬಾಲಕಿ

ಎರಡನೇ ದಿನವೂ ಸಿಗದ ಬಾಲಕಿ

ಅಗ್ನಿ ಶಾಮಕ ಸಿಬ್ಬಂದಿ ಬಳಿಕ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ವೇಗವಾಗಿ ನೀರು ಹರಿಯುವ ಹಳ್ಳದಲ್ಲಿ ಇಳಿದು ಬಾಲಕಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಬೋಟ್‌ಗಳನ್ನು ಬಳಸಿಯೂ ಕೂಡ ಕೊಂಡೊಯ್ದಿದ್ದರು. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಹರಿಯುವ ನೀರಾಗಿರುವುದರಿಂದ ಬೋಟ್ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾಲಕಿಯನ್ನು ಹುಡುಕಾಡಿದ್ದರು. ಕತ್ತಲು ಹೆಚ್ಚಾದ ಕಾರಣ ಅಧಿಕಾರಿಗಳು ಹಾಗೂ ಸ್ಥಳೀಯರು ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಕೈಬಿಟ್ಟು ಮಂಗಳವಾರ ಶುರು ಆರಂಭಿಸಿದ್ದಾರೆ.

 ಬಿರುಗಾಳಿ ಮಳೆಗೆ ಮನೆಮೇಲೆ ಬಿದ್ದ ಮರ

ಬಿರುಗಾಳಿ ಮಳೆಗೆ ಮನೆಮೇಲೆ ಬಿದ್ದ ಮರ

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮಂಗಳವಾರವೂ ಮುಂದುವರಿದಿದ್ದು, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ ಎನ್.ಆರ್.ಪುರ, ಕೊಪ್ಪ, ಚಿಕ್ಕಮಗಳೂರು, ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದದಲ್ಲಿ ಬಿರುಗಾಳಿ ಆರ್ಭಟಕ್ಕೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಕೂಲಿ ಕಾರ್ಮಿಕರಾಗಿರುವ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು,ಕೂದಲೆಳೆ ಅಂತರದಲ್ಲಿ ದಂಪತಿ ಮತ್ತು ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 4:30ರ ವೇಳೆಯಲ್ಲಿ ಮರ ಬಿದ್ದಿದೆ.

 ಶೃಂಗೇರಿ ದೇವಾಲಯದ ಸಂದ್ಯಾವಂದನ ಮಂಟಪ ಮುಳುಗಡೆ

ಶೃಂಗೇರಿ ದೇವಾಲಯದ ಸಂದ್ಯಾವಂದನ ಮಂಟಪ ಮುಳುಗಡೆ

ಶೃಂಗೇರಿ ತಾಲೂಕಿನಲ್ಲೂ ಕೂಡ ಮಳೇ ಬಿಟ್ಟು ಬಿಡದೇ ಸುರಿಯುತ್ತಿದೆ. ಮಳೆಯ ಆರ್ಭಟಕ್ಕೆ ತುಂಗಾನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಗಾಂಧಿ ಮೈದಾನ, ಶೃಂಗೇರಿ ದೇವಾಲಯದ ಸಂದ್ಯಾವಂದನ ಮಂಟಪ, ಶಾರಾದಾಂಬೆ ದೇವಾಲಯಕ್ಕೆ ತೆರಳುವ ಸಿಮೆಂಟ್ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತುಂಗಾ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.

English summary
Heavy rain Continues in chikkamagluru. an unfortunate insident,6 year old school girl swept away in ditch water while returnig to home in hosapete village. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X