ಚಿಕ್ಕಮಗಳೂರಲ್ಲಿ ಮತ್ತೆ 4 ಸೋಂಕು ಪತ್ತೆ, ಬಳ್ಳಾರಿಯಲ್ಲಿ 1 ಸಾವು
ಚಿಕ್ಕಮಗಳೂರು, ಜೂನ್ 16: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂದು ಮತ್ತೆ ನಾಲ್ಕು ಕೊರೊನಾ ವೈರಸ್ ಸೋಂಕು ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಮುಂಬೈನಿಂದ ಬಂದ ನಾಲ್ವರಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿದ್ದು, ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 4 ಮಂದಿಯು ಕ್ವಾರಂಟೈನ್ ನಲ್ಲಿದ್ದವರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ 21 ಪ್ರಕರಣಗಳಿಗೂ ಮುಂಬೈ ಮತ್ತು ದೆಹಲಿ ನಂಟು ಇದೆ. ಇಂದು ದೃಢಪಟ್ಟಿರುವ ಸೋಂಕಿತರಲ್ಲಿ ತರೀಕೆರೆ 1, ಕೊಪ್ಪದ 3 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ.
33 ವರ್ಷದ ಪುರುಷ, 8 ವರ್ಷದ ಬಾಲಕ, 12 ವರ್ಷದ ಬಾಲಕಿ ಹಾಗೂ 38 ವರ್ಷದ ಮಹಿಳೆಗೆ ಕೊರೊನಾ ವೈರಸ್ ಸೋಂಕು ಕಾಣಿಸಿದೆ.

ಇನ್ನು ಬಳ್ಳಾರಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಎರಡನೇ ಬಲಿಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವ್ಯಕ್ತಿ (62) ಸಾವನ್ನಪ್ಪಿದ್ದಾರೆ.
ಇಂಟರ್ ಸ್ಟೇನ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದನು. ಚಿಕಿತ್ಸೆ ಫಲಾಕಾರಿಯಾಗದೆ ವ್ಯಕ್ತಿ ಸಾವಿಗೀಡಾಗಿದ್ದಾನೆ.
ಆದರೆ ಸಾವಿನ ಬಳಿಕ ಕೊರೊನಾ ವೈರಸ್ ಟೆಸ್ಟ್ ನಲ್ಲಿ ಸೋಂಕು ಪಾಸಿಟಿವ್ ಇರುವುದು ಖಚಿತವಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಹೇಳಿದ್ದಾರೆ.












Click it and Unblock the Notifications