ಭಗ್ನ ಪ್ರೇಮಿಯ ಚಾಕು ಇರಿತದಿಂದ ಆಸ್ಪತ್ರೆ ಸೇರಿದ್ದ ಬಿಂದು ಸಾವು
ಚಿಕ್ಕಮಗಳೂರು, ಸೆಪ್ಟೆಂಬರ್ 22: ಚಾಕು ಇರಿತಕ್ಕೆ ಒಳಗಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಸಾಪುರದ ಇಪ್ಪತ್ಮೂರು ವರ್ಷದ ಯುವತಿ ಬಿಂದು ಸಾವನ್ನಪ್ಪಿದ್ದಾಳೆ. ಮೂಡಿಗೆರೆ ತಾಲೂಕಿನ ಮಹಲ್ಗೋಡಿನಲ್ಲಿ ಕೆಲ ದಿನಗಳ ಹಿಂದೆ ಮಿಥುನ್ ಎಂಬಾತ ಆಕೆಗೆ ಚಾಕುವಿನಿಂದ ಇರಿದಿದ್ದ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಂದುಗೆ ಚಾಕುವಿನಿಂದ ಇರಿದಿದ್ದ ಮಿಥುನ್ ಆ ನಂತರ ನಾಪತ್ತೆಯಾಗಿದ್ದ. ಆ ಮೇಲೆ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದ. ಚಾಕು ಇರಿತಕ್ಕೆ ಒಳಗಾಗಿದ್ದ ಬಿಂದುವಿನ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಿಂದು ಶನಿವಾರ ಮೃತಪಟ್ಟಿದ್ದಾಳೆ. ಇದು ಭಗ್ನ ಪ್ರೇಮದ ಪ್ರಕರಣವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಂದುವನ್ನು ಆರೋಪಿ ಮಿಥುನ್ ಚಾಕುವಿನಿಂದ ಇರಿದಿದ್ದ. ತೀವ್ರವಾಗ್ಗಿ ಗಾಯಗೊಂಡಿದ್ದ ಬಿಂದು ಮೂರ್ನಾಲ್ಕು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.












Click it and Unblock the Notifications