ಚಿಕ್ಕಮಗಳೂರು; ದನದ ಕೊಟ್ಟಿಗೆಯಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಕಾಳಿಂಗ
ಚಿಕ್ಕಮಗಳೂರು, ಜನವರಿ 30: ದನದ ಕೊಟ್ಟಿಗೆಯಲ್ಲಿದ್ದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರುಗ ತಜ್ಞ ಕುದುರೆಗುಂಡಿ ಹರೀಂದ್ರ ಇಂದು ಸೆರೆ ಹಿಡಿದಿದ್ದಾರೆ.
ಬೆಳಿಗ್ಗೆ ಕುದುರೆಗುಂಡಿಯ ಚೇತನ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಂಡು ಮನೆಯವರು ಹಾಗೂ ಸ್ಥಳೀಯರು ಆತಂಕಗೊಂಡಿದ್ದರು. ಈ ವೇಳೆ ಉರುಗ ತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಹರೀಂದ್ರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ ಹಾಗೂ ಸ್ಥಳೀಯರಿಗೆ ಹಾವನ್ನು ಒಡೆಯದಂತೆ ಜಾಗೃತಿ ಮೂಡಿಸಿದ್ದಾರೆ. ಅವುಗಳ ಜೀವನ ಶೈಲಿಯ ಬಗ್ಗೆಯೂ ಮಾಹಿತಿ ನೀಡಿ ಅರಿವು ಮೂಡಿಸಿದ್ದಾರೆ. ಹರೀಂದ್ರ ಅವರು ಈವರೆಗೆ ಒಟ್ಟಾರೆ 298 ಕಾಳಿಂಗ ಸರ್ಪಗಳನ್ನು ಹಿಡಿದು ಸೈ ಅನಿಸಿಕೊಂಡಿದ್ದಾರೆ.











Click it and Unblock the Notifications