ಶ್ರೀಗಳ ಅಂತಿಮ ದರ್ಶನಕ್ಕೆಂದು ಬಂದವರು ಶ್ರೀಗಳನ್ನೇ ಸೇರಿದರು
Recommended Video

Siddaganga Swamiji : ಶ್ರೀಗಳ ಅಂತಿಮ ದರ್ಶನ ಪಡೆದವರು ಮತ್ತೆ ವಾಪಾಸ್ ತಮ್ಮ ಮನೆಗೆ ಹೋಗಲೇ ಇಲ್ಲ|Oneindia Kannada
ಚಿಕ್ಕಮಗಳೂರು, ಜನವರಿ 22: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ(111) ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆಂದು ಬಂದು ವಾಪಾಸಾಗುವಾಗ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಪರಮೇಶ್ವರಪ್ಪ (40) ಮೃತ ದುರ್ದೈವಿಯಾಗಿದ್ದಾರೆ.ಗಾಯಾಳುಗಳನ್ನು ಕಡೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













Click it and Unblock the Notifications