Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ಸಾಹಿತ್ಯ ಸಮ್ಮೇಳನಗಳ ಬಗ್ಗೆ ನಿರ್ಲಕ್ಷ್ಯ ಏಕೆ?: ಜನಾಕ್ರೋಶ

ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ರಾಜಕಾರಣಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್‌, 05: ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಯ ಕಾವು ಏರಿದ್ದು, ಅಭ್ಯರ್ಥಿ ಆಕಾಂಕ್ಷಿಗಳು ಭರ್ಜರಿ ತಾಲೀಮು ನಡೆಸುತ್ತಲೇ ಇದ್ದಾರೆ. ಮನೆ ಮನೆಗೆ ತೆರಳಿ ಸಮಾಜ ಸೇವೆಯ ಹೆಸರಿನಲ್ಲಿ ವಿವಿಧ ದೇವಾಲಯಗಳಿಗೆ ಉಚಿತ ತೀರ್ಥಯಾತ್ರೆ ಕಳುಹಿಸುವುದು, ಅದ್ಧೂರಿ ಸಮಾರಂಭಗಳ ಆಯೋಜನೆ, ಕಲ್ಯಾಣೋತ್ಸವಗಳಿಗೆ ಸಾವಿರಗಟ್ಟಲೆ ಜನರನ್ನು ಸೇರಿಸಿ ಅದ್ಧೂರಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ.

ಆದರೆ ಜಿಲ್ಲಾದ್ಯಂತ ಕನ್ನಡ ಸಾಹಿತ್ಯ ಸಮ್ಮೆಳಗಳು ಮಾತ್ರ ನೀರಸವಾಗಿ ನಡೆಯುತ್ತಿದ್ದು, ಜನರಿಲ್ಲದೆ ಈ ಕಾರ್ಯಕ್ರಮಗಳು ಬಿಕೋ ಎನ್ನುತ್ತಿವೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅದರಲ್ಲೂ ಮುಖ್ಯವಾಗಿ ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡ ಭಾಷೆ, ಕನ್ನಡತನದ ನಿರ್ಲಕ್ಷ್ಯವನ್ನು ಅಣುಕಿಸುವಂತಿದೆ. ಸಾವಿರಾರು ಜನರನ್ನು ಕಾರ್ಯಕ್ರಮಗಳಿಗೆ ಸೇರಿಸಿ ಯಶಸ್ವಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಕಡೆ ಯಾರೂ ಮುಖ ಮಾಡುತ್ತಿಲ್ಲ.

Why did neglected about Kannada Sahitya Sammelana in state?, Chikkaballapur people outrage

ರಾಜಕಾರಣಿಗಳ ವಿರುದ್ಧ ಜನಾಕ್ರೋಶ

ಸಾಹಿತ್ಯ ಸಮ್ಮೇಳನವೆಂದರೆ ಒಂದಷ್ಟು ಜ್ಞಾನವಂತರು, ತಿಳುವಳಿಕೆ ಉಳ್ಳವರು ಒಂದೆಡೆ ಸೇರಿಕೊಂಡು ಮಾಡುವ ವಿಶಿಷ್ಟವಾದ ಕಾರ್ಯಕ್ರಮವಾಗಿರುತ್ತದೆ. ಆದೇ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ಬಹುತೇಕ ನಿರ್ಣಯಗಳು ಜನರ ಸಮಸ್ಯೆಯನ್ನು ಪ್ರತಿಬಿಂಬಿಸುತ್ತಿರುತ್ತವೆ. ಸಮ್ಮೇಳನದ ಅಧ್ಯಕ್ಷರು ಆ ವ್ಯಾಪ್ತಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸುವ ಕೆಲಸಗಳು ನಡೆಯುತ್ತವೆ. ವಿಪರ್ಯಾಸವೆಂದರೆ ಹಿಂದಿನ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಇಂದಿಗೂ ನನಸಾಗಿಲ್ಲ.

ಮಾತೃ ಭಾಷೆ, ಸಾಹಿತ್ಯದ ಉಳಿವು ಮತ್ತು ಅಭಿವೃದ್ಧಿಗಾಗಿ ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಈ ಸಮ್ಮೇಳಗಳಲ್ಲಿ ಜನರೂ ಭಾಗವಹಿಸಬೇಕು. ಆದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚಿನ ಜನರ ಸುಳಿವೇ ಕಂಡು ಬರದಿರುವುದು ಬಾಷೆಯ ಬಗ್ಗೆ ಇರುವ ಅಭಿಮಾನವನ್ನು ತೋರಿಸುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ನೀಡುವ ಸೌಲಭ್ಯವೂ ಇದೆ. ಆದರೆ ಕೆಲವರು ಕಾಟಾಚಾರಕ್ಕೆ ಭಾಗವಹಿಸಿ ಫೋಟೋ ತೆಗೆಸಿಕೊಂಡು ಕಾಲ್ಕಿಳುತ್ತಾರೆ. ಇನ್ನು ಕೆಲ ಸರ್ಕಾರಿ ನೌಕರರಂತೂ ಭಾಗವಹಿಸಲು ನಿರಾಸಕ್ತಿ ತೋರುತ್ತಾರೆ.

ಸಮ್ಮೇಳನಗಳನ್ನು ಶಿಷ್ಟಾಚಾರಕ್ಕೆ ಮಾಡುತ್ತಿದ್ದಾರೆ

ಸಾಹಿತ್ಯ ಸಮ್ಮೇಳನಗಳ ಆಹ್ವಾನ ಪತ್ರಿಕೆ ತುಂಬಾ ಗಣ್ಯರ ಹೆಸರುಗಳು ಇರುತ್ತವೆ. ಪ್ರತಿಯೊಂದು ಗೋಷ್ಠಿಗೂ ಕನಿಷ್ಠ 20 ರಿಂದ 40 ಆಹ್ವಾನಿತರು ಇರುತ್ತಾರೆ. ಆದರೆ ವೇದಿಕೆಗೆ ಬರುವವರ ಸಂಖ್ಯೆಯೇ ತೀರ ಕಡಿಮೆ ಆಗಿರುತ್ತದೆ. ವಿಶೇಷವೆಂದರೆ ಕೆಲವು ಗೋಷ್ಠಿಗಳಲ್ಲಿ ವೇದಿಕೆ ತುಂಬಾ ಆಹ್ವಾನಿತರು ಇರುತ್ತಾರೆ. ಆದರೆ ಸಭಿಕರೇ ಅಷ್ಟು ಸಂಖ್ಯೆಯಲ್ಲಿ ಇರಲ್ಲ. ಇದೆಲ್ಲವನ್ನು ಗಮನಿಸಿದರೆ ಸಾಹಿತ್ಯ ಸಮ್ಮೇಳನಗಳು ಶಿಷ್ಟಾಚಾರಕ್ಕೆ ಮಾಡುತ್ತಿರುವ ಭಾವನೆ ಮೂಡಿಸುವಂತಿದೆ.

Why did neglected about Kannada Sahitya Sammelana in state?, Chikkaballapur people outrage

ಚಿಂತಾಮಣಿಯಲ್ಲೂ ನೀರಸ

ಇತ್ತೀಚಿಗೆ ಚಿಂತಾಮಣಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಕೇವಲ ಒಂದೇ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಅಲ್ಲಿಯೂ ಸಹ ಸ್ಥಳಿಯ ಶಾಸಕರು ವೇದಿಕೆಯತ್ತ ಸುಳಿದಿರಲಿಲ್ಲ. ಕೆಲವು ರಾಜಕಾರಣಿಗಳು ಕಾಟಾಚಾರಕ್ಕೆ ಮುಖ ತೋರಿಸಿ ಹೋಗಿದ್ದರು. ಇದು ಕೇವಲ ಚಿಂತಾಮಣಿಯಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿಷಯ ಮಾತ್ರವಲ್ಲ. ಸಾಕಷ್ಟು ಕಡೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಕೆಲವೊಂದು ಬಾರಿ ರಾಜಕಾರಣಿಗಳನ್ನು ಗಣನೆಗೆ ತೆಗೆದುಕೊಂಡರೂ ಕಷ್ಟ, ತೆಗದುಕೊಳ್ಳದಿದ್ದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಆಯಾ ಪ್ರದೇಶದ ಪರಿಷತ್ತಿನ ಅಧ್ಯಕ್ಷರಿಗೆ ಇರುತ್ತದೆ.

ಜಿಲ್ಲಾ ಕೇಂದ್ರದಲ್ಲೂ ನಿರಾಸಕ್ತಿ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ತೀರ ನೀರಸವಾಗಿತ್ತು. ಎರಡು ದಿನಗಳ ಸಮ್ಮೇಳನವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಸೇರಿರಲಿಲ್ಲ. ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಜಿಲ್ಲೆಯ ಇತರ ಕ್ಷೇತ್ರಗಳ ಶಾಸಕರಾಗಲಿ, ಜನಪ್ರತಿನಿಧಿಗಳ ಹೆಸರುಗಳು ಇದ್ದವು. ಆದರೂ ಕೂಡ ಯಾರೊಬ್ಬರೂ ಕಾರ್ಯಕ್ರಮದ ಕಡೆ ಬಂದಿರಲಿಲ್ಲ. ಜನರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೇ ಇದ್ದುದರಿಂದ ಕಾರ್ಯಕ್ರಮವು ನೀರಸವಾಗಿತ್ತು.

ಹೀಗೆ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮುಂದುವರೆದಿದೆ. ಕನಿಷ್ಠ ಆಹ್ವಾನ ಪತ್ರಿಕೆಯಲ್ಲಿರುವ ರಾಜಕಾರಣಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ನಮ್ಮ ತಾಯ್ನುಡಿಯ ಸಮ್ಮೇಳನಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಜನರು ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲಿ ಎಂದು ಹಂಪ ನಾಗರಾಜಯ್ಯ ಹೇಳಿದ್ದಾರೆ.

ಸಾಹಿತ್ಯ ಸಮ್ಮೇಳನಗಳು ಜನರ ಹಬ್ಬಗಳಂತೆ ನಡೆಯಬೇಕು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನೂರಾರು ಹೆಸರುಗಳಿವೆ. ಆದರೆ ಬೆರಳಣಿಕೆಯಷ್ಟು ಆಹ್ವಾನಿತರು ಮಾತ್ರ ಭಾಗವಹಿಸಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಜನರನ್ನು ಕರೆತಂದು ಭಾಷಾಭಿಮಾನ ಬೆಳಸುವ ಕೆಲಸವಾಗಬೇಕಿದೆ ಎಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತ ಬಿ.ಎ.ಕೇಶವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+